ಇಂಡಿ ಪುರಸಭೆ ವ್ಯಾಪ್ತಿಯ ಸ್ಟೇಶನ್ ರಸ್ತೆ, ಪುರಸಭೆ ಮಾಲಿಕತ್ವದ ಸರ್ವೆ ನಂ.626/ಪಿ-01ರಲ್ಲಿ ನೂತನವಾಗಿ ನಿರ್ಮಿಸಲಾದ ಮೆಗಾ ಮಾರುಕಟ್ಟೆ ಹಂತ-1 ರಲ್ಲಿ ಪೂರ್ಣಗೊಂಡ ವಾಣಿಜ್ಯ ಮಳಿಗೆಗಳನ್ನು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕಲಂ 72(2), ಸರ್ಕಾರದ ಸುತ್ತೋಲೆ ಸಂಖ್ಯೆ:ನ.ಅ.ಇ/311/ ಜಿ.ಇ.ಎಲ್/ 2017 ದಿನಾಂಕ: 19-07-2019, ಸರ್ಕಾರದ ತಿದ್ದುಪಡಿ ಆದೇಶ ನ.ಅ.ಇ/ಟಿ.ಎಮ್.ಎಸ್/2021(ಇ) ದಿನಾಂಕ: 04-11-2022 ರನ್ವಯ, ಮಾನ್ಯ ಜಿಲ್ಲಾಧಿಕಾರಿಗಳು ವಿಜಯಪುರ ರವರ ದರ ಅನುಮೋದನೆ ಆದೇಶ ಕ್ರ.ಸಂ:ಜಿ.ನ .ಕೋ-5 ಮಳಿಗೆ ನಿಲಾವು /ಸಿ.ಆರ್/2023-24 ದಿನಾಂಕ 03-11- 2023 ರನ್ವಯ ಬಹಿರಂಗ ಹರಾಜು ಮೂಲಕ ದಿನಾಂಕ: 22-01-2024 ಮತ್ತು 23-01-2024 ರಂದು ಬೆಳಿಗ್ಗೆ 11.00 ಗಂಟೆಗೆ ಮೆಗಾ ಮಾರುಕಟ್ಟೆ ಆವರಣದಲ್ಲಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ, ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ರೂ.500/- ಗಳನ್ನು ಪಾವತಿಸಿ ಪುರಸಭೆಯ ಕಂದಾಯ ವಿಭಾಗದಿಂದ ಖಾಲಿ ಟೆಂಡರ ಫಾರಂ ಪಡೆದುಕೊಳ್ಳುವುದು, ತದನಂತರ ಮುಖ್ಯಾಧಿಕಾರಿ ಪುರಸಭೆ ಇಂಡಿ ಇವರ ಹೆಸರಿಗೆ ರೂ.50,000/-ಗಳ ಡಿ.ಡಿ, ರಾಷ್ಟ್ರೀಕೃತ ಬ್ಯಾಂಕನಿಂದ ತೆಗೆಯಿಸಿ, ಡಿ.ಡಿ.ಯ ಮೂಲ ಪ್ರತಿ, ಗುರುತಿನ ಚೀಟಿ ಹಾಗೂ ಮೀಸಲಾತಿಗೆ ಅನುಗುಣವಾಗಿ ನಿಗಧಿಪಡಿಸಿದ ಅಗತ್ಯ ದಾಖಲಾತಿಗಳನ್ನು ಟೆಂಡರ ಫಾರಂನೊಂದಿಗೆ ಲಗತ್ತಿಸಿ ದಿನಾಂಕ 12-01-2024 ರಿಂದ 17-01-2024 ರ ಸಾಯಂಕಾಲ 5.30ರ ಒಳಗಾಗಿ ಪುರಸಭೆಗೆ ಸಲ್ಲಿಸಲು ತಿಳಿಸಿದೆ. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ವಾಣಿಜ್ಯ ಮಳಿಗೆಗಳ ವಿಸ್ತೀರ್ಣ, ಮೀಸಲಾತಿ, ಠೇವಣಿ ಮೊತ್ತ, ಬಾಡಿಗೆ ಮೊತ್ತ, ಇತ್ಯಾದಿ ಹೆಚ್ಚಿನ ಮಾಹಿತಿಗಾಗಿ ಪುರಸಭೆ ಕಛೇರಿಯ ಸೂಚನಾ ಫಲಕ/ ಮುಖ್ಯಾಧಿಕಾರಿಗಳು/ ಕಛೇರಿ ವ್ಯವಸ್ಥಾಪಕರು/ ಕಂದಾಯ ಅಧಿಕಾರಿಯನ್ನು ಸಂಪರ್ಕಿಸಬಹುದು.
1) ಖಾಲಿ ಟೆಂಡರ ಫಾರಂ ಗಳಿಗೆ ಅರ್ಜಿ ಸಲ್ಲಿಸುವ ಹಾಗೂ ಖಾಲಿ ಟೆಂಡರ.ಫಾರಂ ನೀಡುವ ಕೊನೆಯದಿನಾಂಕ 01.2024 ರಿಂದ 17.01.2024 ಸಂಜೆ 5.30 ಗಂಟೆವರೆಗೆ.
2) ಭರ್ತಿ ಮಾಡಿದ ಟೆಂಡರ ಫಾರಂ ಸ್ವೀಕರಿಸುವ ಕೊನೆಯ ದಿನಾಂಕ: 19.01.2024 ಸಂಜೆ 5.30 ಗಂಟೆವರೆಗೆ.
3) ಬಹಿರಂಗ ಹರಾಜು ದಿನಾಂಕ : 22.01.2024 ಹಾಗೂ 23.01.2024.
4) ಬಹಿರಂಗ ಹರಾಜು ಸ್ಥಳ : ಮೆಗಾ ಮಾರುಕಟ್ಟೆ ಆವರಣ.