ಬಡ ಕುಟುಂಬದಲ್ಲಿ ಹುಟ್ಟಿ, ತಳಸಮುದಾಯದಿಂದ ಬೆಳೆದು ಬಂದ ಚಿನ್ನದ ನಾಡು ಕೋಲಾರ ಜಿಲ್ಲೆ ಬಂಗಾರಪೇಟೆಯ ಎನ್.ಗಾಯತ್ರಿ ತನ್ನ ಕೇವಲ 25 ನೇ ವಯಸ್ಸಿಗೆ ಕರ್ನಾಟಕ ಹೈಕೋರ್ಟ್ ಅಧೀನದಲ್ಲಿ ಬರುವ ಸಿವಿಲ್ ಕೋರ್ಟನ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದಕ್ಕೆ ಜಿಲ್ಲೆಯ ಬ್ರೇವ್ ಬ್ಯಾರಿಸ್ಟ್ ಅಸೋಶಿಯೇಶನ್ ಅಧ್ಯಕ್ಷ ಹಾಗೂ ಯುವನ್ಯಾಯವಾದಿ ಸಂಜು.ಎಸ್, ಕಟ್ಟಿಮನಿ ಅಭಿನಂದಿಸಿದ್ದಾರೆ.
ಮನಸ್ಸಿನಲ್ಲಿ ದೃಢ ಸಂಕಲ್ಪವಿದ್ದು, ಗುರಿ ಸಾಧನೆಗೆ ಛಲ ಬಿಡದೇ ಶ್ರಮಿಸಿದರೆ ಆ ಗುರಿ ಸಾಧಿಸುವುದು ಕಷ್ಟವೇನಲ್ಲ. ಒಂದು ಗುರಿ ಸಾಧನೆಗೆ ಬಡತನ, ಜಾತಿ ಎಂಬಿತ್ಯಾದಿ ಅಂಶಗಳು ಕಾರಣವಾಗುವುದಿಲ್ಲ ಎಂಬುದನ್ನು ತಳಸಮುದಾಯದಿಂದ ಬಂದ ಭೀಮಪುತ್ರಿಯೊಬ್ಬಳು ಅಕ್ಷರಶಃ ಸಾಧಿಸಿ ತೋರಿಸಿದ್ದು, ಕರ್ನಾಟಕ ಹೈಕೋರ್ಟ್ ಅಧೀನದಲ್ಲಿ ಬರುವ ಸಿವಿಲ್ ಕೋರ್ಟ್ನ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಚಿನ್ನದ ನಾಡು ಕೋಲಾರ ಜಿಲ್ಲೆ ಬಂಗಾರಪೇಟೆಯ ಎನ್.ಗಾಯತ್ರಿ ಅವರು ಈ ಮೂಲಕ ತನ್ನ ಸಮುದಾಯಕ್ಕೆ ಅಪಾರ ಕೀರ್ತಿ ತಂದಿದ್ದಾರೆ. ಅಲ್ಲದೇ ಇವರು ಇತರರಿಗೂ ಅದರಲ್ಲೂ ಯುವಜನರಿಗೆ ಮಾದರಿಯಾಗಿದ್ದಾರೆ ಎಂದು ಹಮ್ಮೆಯ ಭಾವನೆ ವ್ಯಕ್ತಪಡಿಸಿದ್ದಾರೆ. 2021 ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿ ಅವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾಡಿದ ಸತತ ಪ್ರಯತ್ನ ಹಾಗೂ ಮನದ ದೃಢ ಸಂಕಲ್ಪದ ಫಲವಾಗಿ ಕೇವಲ ತನ್ನ ಇಪ್ಪತ್ತೆಂÉದನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ ನ್ಯಾಯಾಧೀಶೆಯಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.ದೃಢ ಸಂಕಲ್ಪ ಹಾಗೂ ಸತತ ಪ್ರಯತ್ನದ ಮೌಲ್ಯವನ್ನು ಎತ್ತಿತೋರಿಸಿದ್ದಾರೆ. ಕರ್ನಾಟಕ ಉಚ್ಛನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು.ಇದೀಗ ಅದರ ಫಲಿತಾಂಶ ಪ್ರಕಟಗೊಂಡಿದ್ದು ಅದರಲ್ಲಿ ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ.ಗಾಯತ್ರಿ ಅವರ ಹೆಸರು ಆಯ್ಕೆ ಪಟ್ಟಿಯಲ್ಲಿ ಪ್ರಕಟಗೊಂಡಿದೆ. ಕರ್ನಾಟಕ ನ್ಯಾಯಾಂಗ ಸೇವಾ ಪರೀಕ್ಷೆ ಬರೆದು ಈಗ ಸಿವಿಲ್ ಕೋರ್ಟ್ ನ್ಯಾಯಾಧೀಶೆ ಆಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಳ ಸಮುದಾಯದ ಮತ್ತು ಬಡತನದ ಹಿನ್ನೆಲೆಯಿಂದ ಬಂದ ಗಾಯತ್ರಿಯವರು ಬಂಗಾರಪೇಟೆಯ ಕಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಧ್ಯಾಭ್ಯಾಸ ಆರಂಭಿಸಿ ಬಾಲಕಿಯರ ಪ್ರೌಢಶಾಲೆಯಲ್ಲಿ ಓದಿ ಪದವಿ ಪೂರ್ವ ಕಾಲೇಜು ಶಿಕ್ಷಣ ಪಡೆದುಕೊಂಡಿದ್ದರು.ಕೆಜಿಎಫ್‌ನ ಕೆಂಗಲ್ ಹನುಮಂತಯ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯಲ್ಲಿ ಕರ್ನಾಟಕಕ್ಕೆ ನಾಲ್ಕನೆ ಶ್ರೇಣಿಯನ್ನು ಪಡೆದುಕೊಂಡು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಾಯತ್ರಿಯವರು ಬಂಗಾರಪೇಟೆಯ ನಾರಾಯಣಸ್ವಾಮಿ ವೆಂಕಟಲಕ್ಷ್ಮಿಯವರ ಒಬ್ಬಳೇ ಮಗಳಾಗಿದ್ದು, ತೀರಾ ಬಡತನದಲ್ಲಿ ಹುಟ್ಟಿ ಬೆಳೆದ ಗಾಯಿತ್ರಿಯವರು ಮೊದಲಿನಿಂದಲೂ ಸಾಮಾಜಿಕ ಕಾಳಜಿ ಹೊಂದಿದ್ದು, ಜೀವನಲ್ಲಿ ಏನಾದರೂ ಸಾಧಿಸಬೇಕೆಂಬ ಛಲವನ್ನೂ ಹೊಂದಿದ್ದರು.ಅದರಂತೆ ಇದೀಗ 25ನೇ ವಯಸ್ಸಿಗೆ ಸಿವಿಲ್ ಕೋರ್ಟ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಹೆಮ್ಮೆ ಪಡುವಂತಾಗಿದೆ.ಅಲ್ಲದೇ ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದ ಗಾಯತ್ರಿ ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಂತಾಗಿದೆ. ಇದರಿಂದ ಎಲ್ಲ ಯುವಜನರು ಪಾಠ ಕಲಿಯಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಗಾಯತ್ರಿ ಅವರು ಇಷ್ಟು ಚಿಕ್ಕವಯಸ್ಸಿಗೆ ಮಾಡಿರುವ ಇಂತಹದೊAದು ಅದ್ವಿತೀಯ ಸಾಧನೆಯು ಬಹುಜನರ ಪ್ರಶಂಸೆಗೆ ಪಾತ್ರವಾಗಿದ್ದು, ಬಾಬಾಸಾಹೇಬರು ಅಂದು ಕಂಡ ಕನಸು ಇಂದು ನನಸಾಗುತ್ತಿದೆ.ಭೀಮಕುಲದ ಹೆಮ್ಮೆಯ ನ್ಯಾಯಾಧೀಶ ಎನ್.ಗಾಯತ್ರಿ ಶುಭಾಶಯಗಳು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.