ಕಾಂಗ್ರೆಸ್ನ 5 ಗ್ಯಾರಂಟಿಗಳಿಗೆ ಕೆಲ ಷರತ್ತುಗಳ ವಿಧಿಸಲಾಗಿದೆ. 200 ಯುನಿಟ್ ವಿದ್ಯುತ್ ಮಾತ್ರ ಉಚಿತವಾಗಿರಲಿದೆ. 200 ಯುನಿಟ್ಗಿಂತ ಹೆಚ್ಚಾದರೆ ಶುಲ್ಕ ವಿಧಿಸಲಾಗುತ್ತದೆ. ಇನ್ನು ಉಚಿತ ಬಸ್ ಪಾಸ್ ಹಂಚಿಕೆ ಮಾಡಲಾಗುತ್ತದೆ. ಅದರಲ್ಲೂ ರಾಜ್ಯದ ಮಹಿಳೆಯರಿಗೆ ಮಾತ್ರ ಉಚಿತ ಪಾಸ್ ಅನ್ವಯವಾಗಲಿದ್ದು ಐಷಾರಾಮಿ ಬಸ್ಗಳಲ್ಲಿ ಉಚಿತ್ರ ಪ್ರಯಾಣ ಸೌಲಭ್ಯ ಇರುವುದಿಲ್ಲ. ಇನ್ನು ನಿರುದ್ಯೋಗ ಭತ್ಯೆಯಲ್ಲಿ 2ವರ್ಷದ ವರೆಗೆ ಮಾತ್ರ ಹಣ ನೀಡಲಾಗುತ್ತದೆ. ಒಂದು ವೇಳೆ 2 ವರ್ಷದೊಳಗೆ ಕೆಲಸ ಸಿಕ್ಕರೆ ಅಂದಿನಿಂದ ಹಣ ನೀಡಲಾಗುವುದಿಲ್ಲ ಎಂದಿದ್ದಾರೆ.