ಬಸವನ ಬಾಗೇವಾಡಿ : ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಚಡ್ಡಿ ಮತ್ತು ಲಂಗೋಟಿ ಎರಡನ್ನು ಜನತೆ ಕಳಚಿದಿರುವುದರಿಂದ ಇದೀಗ RSS ಚಡ್ಡಿ ಸುಡಲು ಅವರ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು. ಬಸವನ ಬಾಗೇವಾಡಿ ಮತಕ್ಷೇತ್ರದ ನಿಡಗುಂದಿ ಪಟ್ಟಣದ ಮುದೇಶ್ವರ ಮಂಗಲ ಭವನ ಆವರಣದಲ್ಲಿ ನಡೆದ ವಿಧಾನಪರಿಷತ್ ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದ್ಯ ದೇಶದ 18 ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಿಂದ ವಂಚಿತವಾಗಿದೆ ರಾಜ್ಯ ಮತ್ತು ಕೇಂದ್ರ ಸರಕಾರದ ಬಗ್ಗೆ ಅವರಿಗೆ ಆರೋಪ ಮಾಡಲು ಯಾವುದೇ ವಿಷಯ ಇಲ್ಲದಿರುವುದರಿಂದ RSS ಚಡ್ಡಿಗಳು ಸುಡಲು ಹೋಗಿ ಶೀಘ್ರದಲ್ಲಿಯೇ ಅವರ ಸಂಪೂರ್ಣ ಸುಟ್ಟು ಹೋಗಲಿದ್ದಾರೆ ಎಂದರು.
RSS ಸಂಸ್ಥಾಪಕರ ಹೆಸರು ಪಠ್ಯದಲ್ಲಿ ಸೇರ್ಪಡೆಗೊಳಿರುವುದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಿಂದೆ ತಾವು ಟಿಪ್ಪುಸುಲ್ತಾನ್ ನೆಹರು ಅವರ ಹೆಸರನ್ನು ಪಠ್ಯದಲ್ಲಿ ಸೇರಿಸಿರಲಿಲ್ಲವೇ ಎಂದು ಪ್ರಶ್ನಿಸಿದರು ಸ್ವಾತಂತ್ರ್ಯ ನಂತರ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ವಿರುದ್ಧ ಒಬ್ಬ ಸಾಮಾನ್ಯ ನಿಲ್ಲಿಸಿ ಅಂಬೇಡ್ಕರ್ ಅವರನ್ನು ಸೋಲಿಸಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ ನೆಹರು ಇಂದಿರಾ ರಾಜೀವ್ ಗಾಂಧಿ ನಿಧನದ ನಂತರ ಸುಮಾರು 60 ಎಕರೆ ಜಮೀನನ್ನು ಅವರಿಗೆ ನೀಡದ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ನೀಡಲಿಲ್ಲ ನಮ್ಮ ಸರ್ಕಾರ ಬಂದ ನಂತರ ಮಾಡುತ್ತಿದ್ದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್ ಪಾಟೀಲ್, ಸೋಮನಗೌಡ ಪಾಟೀಲ್ ಮನಗೂಳಿ, ಸುರೇಶ್ ಬಿರಾದಾರ್, ಶಿವಾನಂದ ಅವಟಿ, ಸಾವಿತ್ರಿ ಕಲ್ಯಾಣಶೆಟ್ಟಿ, ಪದ್ಮಾವತಿ ಗುಡಿ ,ಬಸವನಬಾಗೇವಾಡಿ ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ್, ಅಮರಯ್ಯ ಹಿರೇಮಠ ಬಸವರಾಜ್ ದಂಡಿನ ಇದ್ದರು.