ಸರಕಾರಿ ಶಾಲೆಗಳ ಅಭಿವೃದ್ದಿಗೆ ಸ್ಥಳೀಯ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ತಾಲೂಕಿನ ಅಥರ್ಗಾ ಗ್ರಾಮದ ಸರಕಾರಿ ಗಂಡು ಮಕ್ಕಳ ಶಾಲೆಗೆ ನವೀಕೃತ ಕಟ್ಟಡ ಲೋಕಾರ್ಪಣೆ ಮಾಡಿ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸದ ರಮೇಶ ಜಿಗಜಿಣಗಿ ಯವರು ಕಲಿತ ಶಾಲೆಗೆ ಒಂದು ಕೋಟಿ ರೂ ಅನುದಾನ, ಶಾಸಕ ಯಶವಂತರಾಯಗೌಡ ಪಾಟೀಲರು,ಗ್ರಾ.ಪಂ ಅಧ್ಯಕ್ಷರು,ಸದಸ್ಯರು ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು ಹಳೆಯ ಶಾಲೆಗೆ ಹೊಸ ರೂಪ ಕೊಟ್ಟಿರುವದು ಪ್ರಸಂಶಿಸಿದರು.
ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಈ ಭಾಗ ನೀರಾವರಿ ಆಗಬೇಕೆಂಬುದು ಅವರ ಕನಸಾಗಿತ್ತು. ಕಳೆದ ಬಾರಿ ನೀರಾವರಿ ಸಚಿವ ನಿದ್ದಾಗ ಪ್ರಯತ್ನ ಮಾಡಿದ್ದೇನೆ. ಈ ಬಾರಿಯೂ ಜಿಲ್ಲೆ ಎಲ್ಲ ಭಾಗಗಳಿಗೆ ಮತ್ತು ಇಂಡಿ ತಾಲೂಕಿನ ಕೊನೆಯ ಭಾಗದ ವರೆಗೆ ನೀರು ಹರಿಸಲು ಪ್ರಯತ್ನ ಮಾಡುವದಾಗಿ ತಿಳಿಸಿದರು.
ಗ್ರಾ.ಪಂ ಅಧ್ಯಕ್ಷ ನಾಗುಗೌಡ ಪಾಟೀಲರು ಮಾತನಾಡಿ ಸಂಸದ ಜಿಗಜಿಣಗಿಯವರ ಮತ್ತು ಶಾಸಕರ, ಪರಿಶ್ರಮ ಮತ್ತು ವಿವಿಧ ಇಲಾಖೆ ಅನುದಾನದಿಂದ ಒಂದು ಕೋಟಿ ೫೦ ಲಕ್ಷ ರೂ ವೆಚ್ಚದಲ್ಲಿ ಹಳೆಯ ಶಾಲೆಯನ್ನು ನವೀಕರಿಸಲಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ನೀಡಬೇಕು, ಉಜ್ವಲ ಭವಿಷ್ಯ ನಿರ್ಮಿಸಬೇಕೆಂದರು.
ಸಾನಿದ್ಯ ವಹಿಸಿದ ಅಥರ್ಗಾ ವಿರಕ್ತಿಮಠದ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿ ತಾನೂ ಈ ಶಾಲೆಯಲ್ಲಿ ಕಲಿತಿದ್ದು ಈಗ ಶಾಲೆ ನವೀಕರಣ ಗೊಳಿಸಲಾಗಿದ್ದು ಅಥರ್ಗಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಶಿಕ್ಷಣದ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳ ಭವಿಷ್ಯ ರೂಪಿಸಬೇಕೆಂದರು.
ಗಣಪತಿ ಭಾಣಿಕೋಲ,ರಮೇಶ ಗೊಟ್ಯಾಳ, ಅಂಬು ಮೇತ್ರಿ ಮಾತನಾಡಿದರು.
ವೇದಿಕೆಯ ಮೇಲೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ,ಕೆಆರ್ ಐಡಿಎಲ್ ಎಇಇ ಆನಂದ ಸ್ವಾಮಿ, ಎಚ್.ಎಸ್.ನಾಡಗೌಡ ವಕೀಲರು, ದಯಾಸಾಗರ ಪಾಟೀಲ,ಜಿ.ಪಂ ಉಪಾಧ್ಯಕ್ಷ ಸುಶಿಲಾಬಾಯಿ ರಾಠೋಡ, ಅಶೋಕಗೌಡ ಪಾಟೀಲ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಸಲಿಂಗಪ್ಪ ಪೂಜಾರಿ ಮತ್ತಿತರಿದ್ದರು.