ಶಿವಸೇನೆಯ ಹಿರಿಯ ಸಚಿವ ಏಕನಾಥ ಶಿಂಧೆ ಅವರು ಪಕ್ಷದ ವಿರುದ್ಧ ಬಂಡಾಯವೆದ್ದು ಕೆಲವು ಶಾಸಕರನ್ನು ಬಿಜೆಪಿ ಆಡಳಿತವಿರುವ ಗುಜರಾತಿಗೆ ಕರೆದೊಯ್ದು ನಂತರ, 2019 ರಲ್ಲಿ ಅಸ್ತಿತ್ವಕ್ಕೆ ಬಂದ ಶಿವಸೇನೆ ಕಾಂಗ್ರೆಸ್ ಮತ್ತು ಎನ್.ಸಿ.ಪಿ ಮೈತ್ರಿಕೂಟದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರಕಾರ ಮಂಗಳವಾರ ಇಕ್ಕಟ್ಟಿಗೆ ಸಿಲುಕಿತು. ಈ ಮಧ್ಯೆ ಶಿವಸೇನೆ ಶಾಸಕರನ್ನು ಸಿಎಂ ಉದ್ಧವ್ ಠಾಕ್ರೆ ಅವರ ಅಧಿಕೃತ ನಿವಾಸ ವರ್ಷಾ ಬಂಗ್ಲೆಯಿಂದ ವರ್ಲಿ ಸೆಂಟ್ ರೆಜಿಸ್ ಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಡ್ಯಾಮೇಜ್ ಕಂಟ್ರೋಲ್ ಗೆ ಕಸರತ್ತು ಆರಂಭಿಸಿದ್ದು ತಮ್ಮ ಪ್ರತಿನಿಧಿಯನ್ನು ಗುಜರಾತನ ಸುರತಗೆ ಕಳುಹಿಸಿದ್ದಾರೆ. ಸೂರತ್ ಗೆ ಹೋದವರು ಬಂಡಾಯವೆದ್ದ ನಾಯಕ ಶಿಂದೆ ಸೇರಿದಂತೆ ಇತರ ಭಿನ್ನಮತೀಯ ಸೇನಾ ಶಾಸಕರೊಂದಿಗೆ ಮಾತನಾಡಲು ಹೋಟೆಲನಲ್ಲಿ ಮುಕ್ಕಾಂ ಮಾಡಿದ್ದಾರೆ ಮತ್ತು ಬಿಕ್ಕಟ್ಟನ್ನು ಶಮನಗೊಳಿಸಲು ದೂರವಾಣಿಯಲ್ಲಿ ಮಾತನಾಡಿದ್ದಾರೆ. ಮೊನ್ನೆಯಷ್ಟೇ ನಡೆದ ಮಹಾರಾಷ್ಟ್ರ ವಿಧಾನಪರಿಷತ್ತಿನ ಚುನಾವಣೆಯಲ್ಲಿ ವಿರೋಧಪಕ್ಷವಾದ ಬಿಜೆಪಿ ಐದು ಸ್ಥಾನಗಳನ್ನು ಗೆದ್ದಿದೆ ಇದರ ಹಿಂದೆ ಆಡಳಿತ ಪಕ್ಷದ ಶಾಸಕರ ಕೈವಾಡ ಇದೆ ಅಡ್ಡಮತದಾನ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅದರ ಬೆನ್ನಲ್ಲೇ ಶಾಸಕರು ಬಂಡಾಯವೆದ್ದಿದ್ದು ಮೈತ್ರಿಕೂಟಕ್ಕೆ ಆಪರೇಷನ್ ಕಮಲದ ಭೀತಿಯನ್ನು ಸೃಷ್ಟಿಸಿದೆ.