ತಾಲೂಕಿನ ನಿಂಬಾಳ ಕೆಡಿ ಗ್ರಾ.ಪಂ ವ್ಯಾಪ್ತಿಯ ಹೊಸುರ ಹಟ್ಟಿಯ ನಾಗರಿಕರು ತಮಗೆ ಮೂಲಭೂತ ಸೌಕರ್ಯ ಕುರಿತು ಮಿನಿ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಿ ಬರುವ ಲೋಕ ಸಭೆ ಚುನಾವಣೆ ಬಹಿಷ್ಕಾರ ಮಾಡುವ ಶಪಥ ಮಾಡಿದರು.
ನಾಗಪ್ಪ ಆಸಂಗಿ ಮತ್ತು ಭೀಮರಾಯ ಕರಾಂಡೆ ಮಾತನಾಡಿ ನಿಂಬಾಳ ಕೆಡಿ ಗ್ರಾಮದಿಂದ ಹೊಸುರ ಹಟ್ಟಿ ೫ ಕಿ.ಮಿ.ದೂರದಲ್ಲಿದೆ. ಆದರೆ ರಸ್ತೆ ಸರಿಯಾಗಿಲ್ಲ. ರೇಷನ್ ತೆಗೆದುಕೊಂಡು ಹೋಗಲು ವಯೋವೃದ್ದರಿಗೆ, ಮಹಿಳೆಯರಿಗೆ ಅನಾನುಕೂಲವಾಗುತ್ತದೆ. ನಿಂಬಾಳ ಗ್ರಾಮದ ಲಕ್ಷಿö್ಮÃ ಗುಡಿಯ ಹತ್ತಿರ ೨೪*೭ ಕುಡಿಯುವ ನೀರಿನ ವ್ಯವಸ್ಥೆ ಇದ್ದು ಅದನ್ನು ಹೊಸುರ ಹಟ್ಟಿ ಗ್ರಾಮಸ್ಥರಿಗೆ ಒದಗಿಸಬೇಕು. ಬಸ್ಸಿನ ಸೌಲಭ್ಯ ಒದಗಿಸಬೇಕು. ಮಕ್ಕಳಿಗೆ ಶಾಲೆಯ ಸೌಕರ್ಯ ಒದಗಿಸಬೇಕು. ಇಲ್ಲದಿದ್ದರೆ ಲೋಕ ಸಭೆ ಚುನಾವಣೆ ಬಹಿಷ್ಕರಿಸುವದಾಗಿ ತಿಳಿಸಿದರು.
ಇದೇ ವೇಳೆ ಗ್ರಾಮಸ್ಥರೆಲ್ಲರೂ ಸೇರಿ ಲೋಕಸಭೆ ಚುನಾವಣೆ ಬಹಿಷ್ಕರಿಸುವದಾಗಿ ಶಪಥ ಮಾಡಿದರು.
ತಹಸೀಲ್ದಾರರ ಪರವಾಗಿ ಶಿರಸ್ತೆದಾರ ಎಸ್.ಆರ್.ಮುಜಗೊಂಡ ಮನವಿ ಸ್ವೀಕರಿಸಿದರು.
ವಿಠೋಬಾ ಆಸಂಗಿ, ಮಾಳಪ್ಪ ಖರಾತ,ಮಹಾದೇವ ಅಡವಿ, ಜಟ್ಟೆಪ್ಪ ಆಸಂಗಿ, ಲಕ್ಷö್ಮಣ ಆಸಂಗಿ ಮತ್ತಿತರಿದ್ದರು.