ಇಂಡಿ. ಪಾರದರ್ಶಕ ಆಡಳಿತ ನೀಡುವದರ ಜೊತೆಗೆ ಸರ್ವ ಧರ್ಮಿಯರಿಗೆ ಸಮಾನ ಅವಕಾಶ ಕಲ್ಪಿಸಿಕೊಟ್ಟು ಸಮಾಜಮುಖಿಯಾಗಿ ಎಲ್ಲಾ ರಂಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಇಂಡಿ ಕ್ಷೇತ್ರದ ಹ್ಯಾಟ್ರಿಕ್ ಗೆಲವು ಸಾದಿಸಿದ ಅಭಿವೃದ್ಧಿಯ ಅರಿಕಾರರಾದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಎಂದು ಕಾಂಗ್ರಸ್ ಯುವ ಮುಖಂಡ ಹಾಗೂ ಬಿ.ಎಲ್.ಈ ಸಂಸ್ಥೆಯ ಉಪಾಧ್ಯಕ್ಷರಾದ ಹಸನ ಮುಜಾವರ ಹೇಳಿದರು.
ರೈತಪರ, ಮಹಿಳಾಪರ, ದಲಿತಪರ, ಕಾರ್ಮಿಕಪರ ಕೆಲಸ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಸಿಕ್ಕಂತ ಅವಧಿಯಲ್ಲಿ ಶಾಶ್ವತ ಕಾಮಗಾರಿ ಮಾಡಿದ್ದಾರೆ. ಹಿಂದೂ ಮುಸ್ಲಿಂ ಭಾವೈಕ್ಯತೆ ಬೆಸೆಯುವದರ ಜೊತೆಗೆ ಧರ್ಮ ನಿರಾಪೇಕ್ಷ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಬಸವಣ್ಣ, ಅಂಬೇಡ್ಕರ್, ಮಹಾತ್ಮಾ ಗಾಂಧಿ, ಜಯ ಪ್ರಕಾಶ್ ನಾರಾಯಣ, ರಾಮಮನೋಹರ್ ಲೋಹಿಯಾ, ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ, ಕನಕದಾಸ ಮುಂತಾದ ದಾರ್ಶನಿಕರ ಆದರ್ಶ ಅಳವಡಿಸಿಕೊಂಡು ಸಮಾಜ ಸೇವೆ ಸಲ್ಲಿಸಿದ್ದಾರೆ. ಇಂಡಿಯಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಅಂತರ್ ಜಲ ಹೆಚ್ಚಿಸುವಲ್ಲಿ ಯಶಸ್ವೀ ಆಗಿದ್ದಾರೆ. ಶಿಕ್ಷಣ, ಅರೋಗ್ಯ, ಉದ್ಯೋಗ, ಸಂಸ್ಕøತಿ, ನಿರಾವರಿ,ಸಾರಿಗೆ, ಮುಂತಾದ ಕ್ಷೇತ್ರದಲ್ಲಿ ಗಣನಿಯ ಸಾಧನೆ ಮಾಡಿದ್ದಾರೆ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ಇಂಡಿ ವಿಧಾನಸಭಾ ಕ್ಷೆತ್ರ ಗಡಿ ಪ್ರದೇಶವಾಗಿದ್ದು ಈ ಕ್ಷೆತ್ರದಿಂದ ಇಲ್ಲಿಯವರೆಗೆ ಯಾರು ಮಂತ್ರಿ ಆಗಿರುವದಿಲ್ಲ. ಯಶವಂತರಾಗೌಡ ಪಾಟೀಲ ಅವರಿಗೆ ಸಂಪುಟದಲ್ಲಿ ಹೆಸರು ಘೋಷಿಸಬೇಕು.
ಶಾಸಕರ ಸೇವೆಯನ್ನು ಗಣನೆಗೆ ತೆಗೆದುಕೊಂಡು ಮತ್ತು ಮುಂದೆ ಅವರ ಅನುಭವ ಆದರಿಸಿ ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಖಂಡಿತ ಅವರು ರಾಜ್ಯಕ್ಕೆ ಮಾದರಿ ಆಗುವ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಆದರಿಂದ ಅವರಿಗೆ ಮಂತ್ರಿ ಸ್ಥಾನ ನೀಡಲೇ ಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ