ವಿವಿಧ ಕನ್ನಡ ಪರ ಸಂಘಟನೆ ಹಾಗೂ ರೈತ ಸಂಘಗಳು ಕಾವೇರಿ ನೀರಿಗಾಗಿ ನೀಡಿರುವ ಬಂದ್ ಕರೆಗೆ ವಿಜಯಪುರ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ಅಟೋ ಸಂಚಾರ ಆರಂಭವಿದ್ದರೆ, ಅಂಗಡಿ ಮುಂಗಟ್ಟು ಗಳು ಸಹಿತ ಪ್ರಾರಂಭವಿದ್ದವು, ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಎಂದಿನಂತೆ ಹೋದರು. ಇನ್ನೂ ನೈತಿಕ ಬೆಂಬಲವನ್ನು ವ್ಯಾಪಾರಸ್ಥರು ಸೇರಿದಂತೆ ವಿವಿಧ ಸಂಘಟನೆಯವರು ನೀಡಿದರು.