ಗೃಹಲಕ್ಷ್ಮಿ ಯೋಜನೆ ಪಡೆಯಲು ಆದಾಯ ತೆರಿಗೆ ಪಾವತಿದಾರರ ಪಡಿತರ ಚೀಟಿ ಹೊಂದಿದವರು ಅರ್ಹರಲ್ಲ. ಅಂತಹ 1.78 ಲಕ್ಷ ಫಲಾನುಭವಿಗಳನ್ನು ಪತ್ತೆ ಮಾಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಮಾಹಿತಿ ನೀಡಿದ್ದಾರೆ. ಆದಾಯ ತೆರಿಗೆ ಪಾವತಿದಾರರ ಮನೆಯ ಯಜಮಾನಿಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಡಲಾಗಿದೆ ಎಂದಿದ್ದಾರೆ. ಇನ್ನುಳಿದ ಫಲಾನುಭವಿಗಳು ಯಾವುದೇ ಚಿಂತೆ ಮಾಡಬೇಕಿಲ್ಲ. ಅವರಿಗೆಲ್ಲಾ ಗೃಹಲಕ್ಷ್ಮೀ ಯೋಜನೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.