ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ನಿವಾಸಿ ತಂದೆ ಕಾಮಣ್ಣ ಹರಳಯ್ಯ ಮತ್ತು ತಾಯಿ ವಿಮಲಾಬಾಯಿ ಇವರ ಪುತ್ರ ಡಾ. ಸಂಜೀವ ಹರಳಯ್ಯ ಇವರಿಗೆ ನವದೆಹಲಿಯಲ್ಲಿ ನಡೆದ ೩೯ ನೇ ರಾಷ್ಟ್ರೀಯ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ನ್ಯಾಶನಲ್ ಫೆಲೋಶಿಫ್ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ. ಸಂಜೀವ ಅವರ ಶಿಕ್ಷಣ ಮತ್ತು ಸಾಧನೆ ಪರಿಗಣಿಸಿ ಈ ಗೌರವ ನೀಡಿದೆ.
ಬಡತನ ಕುಟುಂಬದಲ್ಲಿ ಜನಿಸಿದ ಡಾ. ಸಂಜೀವ ಗದಗ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯಲ್ಲಿ ಶುಶ್ರೂಷಾಧಿಕಾರಿ ಮತ್ತು ಸರಕಾರಿ ಶುಶ್ರೂಷಾ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು ಅವರು ಬರೆದ ಮಕ್ಕಳು ಕಲಿಕೆ ಆಲಿಕೆಗಳು ಪ್ರಬಂದಕ್ಕೆ ಅರುಣಾಚಲ ಪ್ರದೇಶದ ಹಿಮಾಲಯ ವಿವಿ ಡಾಕ್ಟರೇಟ ಪದವಿ ನೀಡಿ ಗೌರವಿಸಿದೆ.
ಮತ್ತು ಇಂಟರ್ ನ್ಯಾಶನಲ್ ಜನರಲ್ ಆಫ್ ಅಡ್ವಾನ್ಸ ಸೆಕ್ರೆಟರಿ ನರ್ಸಿಂಗ್ ಸಹ ಎಡಿಟರ್ ಆಗಿ ಆಯ್ಕೆ ಆಗಿದ್ದಾರೆ.
ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಡಾ. ಸಂಜೀವ ಹರಳಯ್ಯ ಇವರಿಗೆ ನವದೆಹಲಿಯಲ್ಲಿ ನಡೆದ ೩೯ ನೇ ರಾಷ್ಟಿçÃಯ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಬಿ.ಆರ್.ಅಂಬೇಡ್ಕರ ನ್ಯಾಶನಲ್ ಫೆಲೋಶಿಫ್ ಪ್ರಶಸ್ತಿ ನೀಡಿ ಗೌರವಿಸಿದೆ.