ಇಂಡಿ.ತಾಲೂಕಿನ ಸಮಗ್ರ ಕೆರೆಗೆ ನೀರು ತುಂಬಿಸುವಂತೆ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆಸುವ ರೈತಪರ ಸಂಘಟನೆಗಳು ಹಾಗೂ ರೈತರ ಹೋರಾಟಕ್ಕೆ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ತಮ್ಮ ಸಾವಿರಾರು ಕಾರ್ಯಕರ್ತರರೂಂದಿಗೆ ತಡವಲಗಾದ ಜೋಡ ಗುಡಿಯ ಹತ್ತಿರದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ .ನಂತರ ಮಾತನಾಡಿ ಇಂಡಿಭಾಗದ ರೈತರಿಗೆ ಹೋರಾಟಗಳು ಅನಿವಾರ್ಯವಾಗಿವೆ. ಬಿಕರ ಬರದಿಂದ ಕಂಗೆಟ್ಟಿರುವ ರೈತರು, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಹಾಗೂ ತಿಡಗುಂದಿ ಬ್ರ್ಯಾಂಚ್ ಕಾಲುವೆಯ ಮೂಲಕ ತಾಲೂಕಿನ ,ತಡವಲಗಾ, ಲಿಂಗದಳ್ಳಿ, ಬೋಳೆಗಾಂವ, ಅಥರ್ಗಾ, ಮುಂತಾದ ಕೆರೆಗಳು ಬತ್ತಿ ಸಂಪೂರ್ಣ ಅಂತರ ಜಾಲ ಕುಸಿದ್ದಿದ್ದು,ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ ರೈತರ ಸಂಕಷ್ಟದ ಸಮಯದಲ್ಲಿ ನೀರು ಕೊಟ್ಟರೆ ಹೋದ ಜೀವ ಮರಳಿ ಬಂದಂತಾಗುತ್ತದೆ ಆಳುವ ಸರ್ಕಾರ ಕುರುಡುತನ ತೋರದೆ ಕೂನೆಯ ಭಾಗದವರಿಗೆ ನೀರು ಹರಿಸುವಂತೆ ಸರ್ಕಾರಕ್ಕೆ , ಉಪವಿಭಾಗಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಕೆಬಿಜೆಲಿನ ಗೋವಿಂದ ರಾಠೋಡ ಉಪಸ್ಥಿತರಿದ್ದರು ಧರಣಿ ಸತ್ಯಾಗ್ರಹ ನಡೆಯುತ್ತಿದೆ, ಆದರೆ ಈ ಹೋರಾಟ ನೀರು ತುಂಬಿಸುವ ವರೆಗೆ ನಿಲ್ಲುವದಿಲ,ಈ ಹೋರಾಟಕ್ಕೆ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿದೆ ,ಜೈಲಿಗೆ ಹಾಕಲಿ ಇಲ್ಲವೆ ಗುಂಡು ಹಾಕಲಿ ನಮ್ಮ ಹೋರಾಟ ನಿರಂತರವಾಗಿ ಈ ಹೋರಾಟ ಬೆಂಬಲವಿದೆ ಎಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡಿದರು.ಇದೆ ಸಂದರ್ಭದಲ್ಲಿ ಕಿಸಾನ್ ಸಂಘದ ಅಧ್ಯಕ್ಷ ಗುರುನಾಥ ಬಗಲಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುನಂದಾ ವಾಲಿಕಾರ ಹಾಗೂ ಮುಂತಾದ ರೈತಾಪಿ ವರ್ಗ ಉಪಸ್ಥಿತರಿದ್ದರು