ತಾಲೂಕಿನಲ್ಲಿ ಒಟ್ಟು ೪೨೩೨೦ ಜನ ರೈತರಿಗೆ ೬೪ ಕೋಟಿ ೭೧ ಲಕ್ಷ ೯೬೭೯೫ ರೂ, ಗಳು ಮಂಜೂರಿಯಾಗಿದ್ದು, ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ತಹಸೀಲ್ದಾರ ಮಂಜುಳಾ ನಾಯಕ ತಿಳಿಸಿದ್ದಾರೆ.
ಅವರು ಪಟ್ಟಣದ ತಹಸೀಲ್ದಾರ ಕಚೇರಿಯ ಸಬಾಭವನದಲ್ಲಿ ನಡೆದ ಬೆಳೆ ಪರಿಹಾರ ಕುರಿತು ಅಧಿಕಾರಿಗಳು ಮತ್ತು ತಾಲೂಕಿನ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು.
ರೈತರಲ್ಲಿ ಕೆಲವು ರೈತರ ಖಾತೆಗಳು ಸ್ಥಗಿತಗೊಂಡಿವೆ, ಕೆಲವು ರೈತರ ಆಧಾರ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಇಲ್ಲದಿರುವದು, ಕೆಲವು ರೈತರ ಹೆಸರುಗಳು ಬ್ಯಾಂಕ್ ಖಾತೆಯಲ್ಲಿ ಮತ್ತು ಆಧಾರ ಕಾರ್ಡಗಳಲ್ಲಿ ಬೇರೆ ಬೇರೆಯಾಗಿರುವದು, ರೈತರು ಬೇರೆ ಕಡೆಗೆ ಹೋಗಿರುವದು, ತೀರಿ ಕೊಂಡಿರುವ ರೈತರ ಕುರಿತು ಬ್ಯಾಂಕಿನಲ್ಲಿ ಸಮಸ್ಯೆ ಇರಬಹುದು.
ಎನ್ ಪಿ ಸಿ ಐ ಮಾಡಿಸದಿರುವದು, ಇಂತಹ ಸಮಸ್ಯಗಳಿಂದ ಒಟ್ಟು ತಾಲೂಕಿನಲ್ಲಿ ೩೨೬೬ ರೈತರ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗಿಲ್ಲ. ಈ ಬಗ್ಗೆ ರೈತರು ಭಯ ಪಡುವ ಅಗತ್ಯವಿಲ್ಲ. ಇಂತಹ ರೈತರು ಕೂಡಲೇ ತಮ್ಮ ತಮ್ಮ ಬ್ಯಾಂಕಗಳಿಗೆ ಭೇಟಿ ನೀಡಿ ಪರಿಹಾರದ ಹಣ ಏಕೆ ಜಮೆಯಾಗಿಲ್ಲ ಎನ್ನುವದನ್ನು ಕಂಡುಕೊAಡು ಸಮಸ್ಯಗೆ ಪರಿಹಾರ ಒದಗಿಸಬೇಕು. ಹೀಗೆ ಮಾಡಿದ್ದಾದರೆ ಪರಿಹಾರದ ಹಣ ತಕ್ಷಣವೇ ಜಮೆಯಾಗುತ್ತವೆ ಎಂದು ಅವರು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಟಿ.ಪಾಟೀಲರು ಮಾತನಾಡಿ ರೈತರು ಬ್ಯಾಂಕ ಸಮಸ್ಯೆ ಹೊಂದಿರುವವರು ಅಂಚೆ ಕಚೇರಿಯಲ್ಲಿ ಹೊಸ ಅಕೌಂಟ ತೆಗೆದರೆ ಕೂಡಲೇ ಅವರ ಬೆಳೆ ಜಮೆ ಆಗುತ್ತದೆ ಎಂದರು.
ಇಂಡಿ ತಾಲ್ಲೂಕಿನಲ್ಲಿ ಕಳೆದ ೨ ದಿವಸಗಳ ಹಿಂದೆಅಕಾಲಿಕ ಮಳೆ ಮತ್ತು ಗಾಳಿಯಿಂದ ಹಳಗುಣಕಿ, ಹೊರ್ತಿ, ಹಿರೇಬೇವನೂರ, ನೆಹರುನಗರ, ಚಿಕ್ಕಬೇವನೂರ, ಇಂಡಿ, ದೇಗಿನಾಳ, ಮಸಳಿ ಕೆಡಿ, ಬಸನಾಳ, ಆಳೂರ, ಲಚ್ಯಾಣ, ಬೈರುಣಗಿ ಮತ್ತು ಬೂದಿಹಾಳ ಗ್ರಾಮಗಳಲ್ಲಿ ೧ ಹೆಕ್ಟರ್ ದ್ರಾಕ್ಷಿ, ೧ ಹೆಕ್ಟರ್ ದಾಳಿಂಬೆ, ೧೦.೦೫ ಹೆಕ್ಟರ್ ನಿಂಬೆ, ೨.೪೦ ಹೆಕ್ಟರ್ ಬಾಳೆ ಬೆಳೆಗೆ ಹಾನಿಯಾಗಿದ್ದು, ಒಟ್ಟು ಸುಮಾರು ೩ ಲಕ್ಷದಷ್ಟು ಹಾನಿಯಾಗಿದೆ. ಇದರಬಗ್ಗೆ ಸರ್ಕಾರಕ್ಕೆ ವರದಿ ಕಳಿಸಿಕೊಡಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ಹೇಳಿದರು.
ವೇದಿಕೆಯ ಮೇಲೆ ರೇಷ್ಮೆ ಅಧಿಕಾರಿ ಅಶೋಕ ತೇಲಿ ಇದ್ದರು.
ಕಾರ್ಯಕ್ರಮದಲ್ಲಿ ಶಿರಸ್ತೆದಾರ ಎಸ್.ಆರ್.ಮುಜಗೊಂಡ, ಅಂಚೆ ಪಾಲಕ ಎಸ್. ಡಿ. ಬಿರಾದಾರ, ಕರ್ನಾಟಕ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ರಾಮಯ್ಯ ಕಾಖಂಡಗಿ, ಉಪ ತಹಸೀಲ್ದಾರ ಎ.ಎಸ್.ಗೊಟ್ಯಾಳ, ಕಂದಾಯ ನಿರೀಕ್ಷಕ ಎಚ್.ಎಚ್.ಗುನ್ನಾಪುರ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.