ಪ್ರತಿಯೊಬ್ಬರ ಮತವೂ ಅಮೂಲ್ಯವಾದದ್ದು, ಎಲ್ಲರೂ ಚುನಾವಣೆ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು. ತಮ್ಮ ಕುಟುಂಬ, ಸ್ನೇಹಿತರು ನೆರೆಹೊರೆಯವರು ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಮತದಾನದ ಹಕ್ಕು ಚಲಾಯಿಸಲು ಪ್ರೇರೆಪಿಸಬೇಕೆಂದು ಚುನಾವಣೆ ರಾಯಭಾರಿ ರಾಜೇಶ ಪವಾರ ಹೇಳಿದರು.
ಅವರು ಪಟ್ಟಣದಲ್ಲಿ ತಾಲೂಕಾ ಸ್ವೀಪ್ ಸಮಿತಿ, ತಾಪಂ ಇಂಡಿ, ತಾಲೂಕು ಆರೋಗ್ಯ ಇಲಾಖೆ, ಸಾರ್ವಜನಿಕ ಸರಕಾರಿ ಆಸ್ಪತ್ರೆ ಸಹಯೋಗದಲ್ಲಿ ನಡೆದ ಮತದಾನದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷೆ ಮತ್ತು ಇಒ ನೀಲಗಂಗಾ ಬಬಲಾದ ಮಾತನಾಡಿ ಮತದಾನ ಕೇವಲ ಹಕ್ಕಷ್ಟೇ ಅಲ್ಲ. ಕರ್ತವ್ಯವೂ ಹೌದು. ಯಾವದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ ಆಸ್ಪತ್ರೆಯ ಮುಖ್ಯಸ್ಥ ಐ.ಎಸ್.ಧಾರವಾಡಕರ, ವಿನೋದ ಸಜ್ಜನ, ಸಾಹಿಲ್ ಧನಶೆಟ್ಟಿ, ಡಾ|| ಪ್ರೀತಿ ಕೋಳೆಕರ, ಡಾ|| ಅಮೀತ ಕೋಳೆಕರ, ಡಾ|| ವಿಪುಲ್ ಕೋಳೆಕರ, ನಂದಿಪ ರಾಠೋಡ, ಪ್ರಭಾಕರ ಪೂಜಾರಿ, ರಾಮಗೌಡ ಸರಬಡಗಿ ಮತ್ತಿತರಿದ್ದರು. ನಂದೀಪ ರಾಠೋಡ ಇವರಿಂದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.