ಟರ್ಕಿ (ತುರ್ಕಿ) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರೆಸೆಪ್ ತಡ್ಯೂಪ್ ಎರ್ಡೊಗನ್ ಭರ್ಜರಿ ಜಯ ದಾಖಲಿಸಿದ್ದು, ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಎರ್ಡೊಗನ್ ಅವರ ೧೧ನೇ ಚುನಾವಣಾ ಗೆಲುವಾಗಿದೆ. ಭಾನುವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಎರ್ಡೊಗನ್ ಅವರು ವಿಪಕ್ಷ ನಾಯಕ ಕೆಮಲ್ ಕಿಲಿಕ್ಡರೊಗ್ಗು ಅವರನ್ನು ಸೋಲಿಸಿದರು. ಕಳೆದ ೨೦ ವರ್ಷಗಳಿಂದ ಟರ್ಕಿ ಆಡಳಿತ ನಡೆಸುತ್ತಿರುವ ಎರ್ಡೊಗನ್ ಅವರು ಈ ಚುನಾವಣೆ ವಿಜಯದ ಮೂಲದ 2028ರವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.