ಕರ್ತವ್ಯ ನಿರತ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ ಮಾಡಿರುವ ಘಟನೆ ಗುರುವಾರ ತಾಲೂಕಿನ ಗೊರನಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ವರ್ಗಾವಣೆ ಪ್ರಮಾಣದಲ್ಲಿ ಗಂಡು ಎಂದು ನಮೂದಿಸುವ ಬದಲಾಗಿ ಹೆಣ್ಣು ಎಂದು ತಪ್ಪಾಗಿದ್ದರಿಂದ ಮುಖ್ಯ ಶಿಕ್ಷಕನ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ.
ಕುಮಾರ ರಾವುತರಾಯ ಪರಸಪ್ಪ ನಾಗಠಾಣ ಎಂಬ ವಿದ್ಯಾರ್ಥಿಗೆ ೯ ನೇ ತರಗತಿ ಪ್ರವೇಶಕ್ಕಾಗಿ ನೀಡಬೇಕಾಗಿದ್ದ ವರ್ಗಾವಣೆ ಪತ್ರದಲ್ಲಿ ಲಿಂಗ ಕಾಲಂನಲ್ಲಿ ಗಂಡು ಬದಲಾಗಿ ಹೆಣ್ಣು ಎಂದು ಬರೆಯಲಾಗಿತ್ತು. ಈ ಲೋಪವಾಗಿದ್ದನ್ನು ತಿದ್ದುಪಡಿ ಮಾಡಿ ಗುರುವಾರದಂದು ಸರಿಪಡಿಸಿ ನೀಡಲಾಗಿದೆ. ಆದರೂ ವಿದ್ಯಾರ್ಥಿಗೆ ಯಾವುದೇ ಸಂಬಂಧವಿಲ್ಲ ಅರ್ಜುನ ಖೇಡ ಹಾಗೂ ಸುಧಾಕರ ಜಟ್ಟೆಪ್ಪ ಪೂಜಾರಿ ಎಂಬುವವರು ಮುಖ್ಯ ಶಿಕ್ಷಕರನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿಬೆದರಿಕೆ ಒಡ್ಡಿದ್ದಾರೆ ಎಂದು ಮುಖ್ಯ ಶಿಕ್ಷಕ ಮಲ್ಲೇಶಿ.ಪಿ.ಚಿಮ್ಮಾಗೋಳ ಅವರು ಇಂಡಿ ಗ್ರಾಮೀಣ ಪೋಲಿಸರಿಗೆ ದೂರು ನೀಡಿದ್ದಾರೆ.
ಕರ್ತವ್ಯ ನಿರತ ಮುಖ್ಯ ಶಿಕ್ಷಕರ ಮೇಲೆ ಹಲ್ಲೆ ಖಂಡನಿಯ ಎಂದು ಗ್ರಾಮೀಣ ಪೋಲಿಸ್ ಠಾಣಾ ಪಿ ಎಸ್ ಐ ಮಂಜುನಾಥ ಹಲುಕಂದ ಅವರಿಗೆ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ರಾಜ್ಯ ಸರಕಾರಿ ನೌಕರ ಸಂಘದಿAದ ಮನವಿ ಸಲ್ಲಿಸಿದರು.
ಮುಖ್ಯ ಶಿಕ್ಷಕ ಎಮ್ ಪಿ ಚಿಮ್ಮಾಗೋಳ ಅವರ ಮೇಲೆ ಹಲ್ಲೆ ಖಂಡನಿಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಾಯ್ ಟಿ ಪಾಟೀಲ ಹೇಳಿದರು. ಹಲ್ಲೆ ಮಾಡಿದ ಆರೋಪಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಶಾಲಾ ಅವಧಿಯಲ್ಲಿ ಶಿಕ್ಷಕರ ಮೇಲೆ ಪದೇ ಪದೇ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದಕ್ಕಾಗಿ ಸುರಕ್ಷಿತವಾಗಿ ಮಕ್ಕಳಿಗೆ ಪಾಠ ಮಾಡಲು ಅವಕಾಶ ನೀಡಬೇಕು. ಆದ್ರೇ, ಕಾಣದ ಕೈಗಳು ಶಾಲಾ ಶಿಕ್ಷಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಅದಕ್ಕಾಗಿ ಜಿಲ್ಲಾ ಪೊಲೀಸ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಜಯರಾಮ ಚವ್ಹಾಣ, ಅಲ್ಲಾಬಕ್ಷ ವಾಲಿಕಾರ, ಎಸ್.ವಿ.ಹರಳಯ್ಯ,ರಾಮಸಿಂಗ ಕನ್ನೊಳ್ಳಿ ಮತ್ತು ಹುಚ್ಚಪ್ಪ ತಳವಾತ ಮತ್ತಿತರಿದ್ದರು.