ವಾಣಿಜ್ಯ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ದಿಯಲ್ಲಿ ಪ್ರಸಿದ್ದಿ ಪಡೆಯುತ್ತಿರುವ ಇಂಡಿ ಪಟ್ಟಣವು ಮುಂಬರುವ ದಿನಗಳಲ್ಲಿ ಶಿಕ್ಷಣ ರಂಗದಲ್ಲಿಯೂ ಉತ್ತಮ ಪ್ರಗತಿಯತ್ತ ಸಾಗುತ್ತಿದ್ದು ಈ ದಿಶೆಯಲ್ಲಿ ಸಾರ್ವಜನಿಕರು ಸೇರಿದಂತೆ ಸಮುದಾಯದ ಸರ್ವರ ಸಹಕಾರ ತುಂಬ ಅಗತ್ಯವಾಗಿದೆ ಎಂದು ರಾಣಿ ಚೆನ್ನಮ್ಮ ವಿವಿ ಸಿಂಡಿಕೇಟ ಸದಸ್ಯ ಮತ್ತು ಪ್ರಾಚಾರ್ಯ ಡಾ. ಶಶಿಕಾಂತ ಪತಂಗಿ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೩ ೨೪ ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ಬಿ.ಎ. ಬಿ.ಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಚಾರ್ಯ ಡಾ. ಆರ್.ಎಚ್. ರಮೇಶ ಮಾತನಾಡಿ ಶಿಕ್ಷಣದ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಿದಾಗ ಮಾತ್ರ ಈ ದೇಶದ ಭವಿಷ್ಯವನ್ನು ಎತ್ತಿ ಹಿಡಿಯಲು ಸಾಧ್ಯವಿದೆ. ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸುವದರ ಜೊತೆಗೆ ಶಿಕ್ಷಣದ ಪ್ರಗತಿ ಎಂದರು.
ಡಾ. ಜೆ.ಎಸ್. ಮಾಡ್ಯಾಳ, ಕವೀಂದ್ರ, ನಿವೃತ್ತ ಪ್ರಾಚಾರ್ಯ ಉಮೇಶ ಕೋಳೆಕರ, ಸಾಧನೆ ಗೈದ ಹಳೆಯ ವಿದ್ಯಾರ್ಥಿ ಡಾ. ಸತೀಶ ಈಶ್ವರಗೊಂಡ, ರಾಜ್ಯ ಪ್ರಶಸ್ತಿ ವಿಜೇತ ಪೂಜಾ ಸಾರವಾಡ, ಡಾ. ಸರೀನಾ ಸುಲ್ತಾನಾ ಇನಾಮದಾರ ಮಾತನಾಡಿದರು.
ಇದೇ ವೇಳೆ ಪಿಎಚ್ಡಿ ಪಡೆದು ಸಾಧನೆಗೈದ ಹಳೆಯ ವಿದ್ಯಾರ್ಥಿಗಳಾದ ಡಾ. ಸತೀಶ ಈಶ್ವರಗೊಂಡ,ಡಾ. ಹಣಮಂತ್ರರಾಯ ಹೊನ್ನಳ್ಳಿ, ಡಾ. ರಾಜು ನಂದ್ರಾಳ ಮತ್ತು ರಾಜ್ಯ ಪ್ರಶಸ್ತಿ ಪಡೆದ ಪೂಜಾ ಸಾರವಾಡ ಇವರನ್ನು ಸನ್ಮಾನಿಸಲಾಯಿತು.
ಅದಲ್ಲದೆ ರಾಜ್ಯ ಪ್ರಶಸ್ತಿ ವಿಜೇತ ಪೂಜಾ ಸಾರವಾಡ ಇವರನ್ನು ಜನನಿ ಮಹಿಳಾ ಸ್ವ ಸಹಾಯ ಸಂಘ ಮತ್ತು ಸ್ನೇಹ ಜೀವಿ ಸಂಘ ರೂ ೫೦೦೧ ಕಾಣಿಕೆ ನೀಡಿ ಸನ್ಮಾನಿಸಿದರು.
ಸಮಾರಂಭದಲ್ಲಿ ಡಾ. ರಮೇಶ ಕತ್ತಿ,ತಿಪ್ಪಣ್ಣ ವಾಗ್ದಾಳ, ಡಾ. ವಿಜಯಮಹಾಂತೇಶ ದೇವರ,ಪ್ರೊ ಕಿರಣ ರೇವಕರ,ಪರಸಪ್ಪ ದೇವರ ಮತ್ತಿತರಿದ್ದರು.