ದೇಶಕ್ಕೆ ಗಂಡಾಂತರ ಎದುರಾದಾಗ ತುರ್ತು ಪರಿಸ್ಥಿತಿ ಘೋಷಿಸದೆ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಕುರ್ಚಿಗೆ ತೊಂದರೆಯಾದಾಗ ಸಂವಿಧಾನದತ್ತ ತುರ್ತುಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದನ್ನು ಮರೆಯುವಂತಿಲ್ಲ ಎಂದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು. ಮುದ್ದೇಬಿಹಾಳ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಮಂಡಲದ ವತಿಯಿಂದ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಕರಾಳದಿನ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಆಗಿನ ಸಂದರ್ಭದಲ್ಲಿ ಕಾಂಗ್ರೆಸ್ನ ಆಡಳಿತ ಸರ್ವಾಧಿಕಾರದಿಂದ ಕೂಡಿತ್ತು. ಉದ್ದೇಶಪೂರ್ವಕವಾಗಿ ಜನಸಂಘ ಹಾಗೂ ಕಾರ್ಯಕರ್ತರನ್ನು ಪತ್ರಕರ್ತರನ್ನು ಬಂಧಿಸಲಾಯಿತು. ಅರೆಸ್ಟ್ ಆದ ಶೇ. 100 ಜನರ ಪೈಕಿ 90 ಜನ ಆರ್ ಎಸ್ ಎಸ್ ನವರೆ ಆಗಿದ್ದರು. ದೇಶಾದ್ಯಂತ ಆಚರಿಸಲಾಗುವ ತುರ್ತು ಪರಿಸ್ಥಿತಿ ಕರಾಳ ದಿನದ ಉದ್ದೇಶ, ಆ ಸಂದರ್ಭದಲ್ಲಿ ನಡೆದ ಘಟನೆಯ ಬಗ್ಗೆ ಜನಜಾಗೃತಿ ಮೂಡಿಸಿ, ಭಾರತದ ಪ್ರಜಾಪ್ರಭುತ್ವದ ಆಶಯವನ್ನು ಬಲಪಡಿಸುವುದಾಗಿದೆ ಎಂದರು. ಶಾಸಕ ,ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಸ್ವತಂತ್ರ ಭಾರತಕ್ಕೆ ಸ್ವಾತಂತ್ರ್ಯದ ಮಹತ್ವ ಗೊತ್ತಾಗಿದ್ದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ. ಪತ್ರಕರ್ತರು ಒಳಗೊಂಡಂತೆ ದೇಶದ ಎಲ್ಲ ಜನರ ಸ್ವಾತಂತ್ರ್ಯವನ್ನು ಆ ಸಂದರ್ಭದಲ್ಲಿ ಕಿತ್ತುಕೊಳ್ಳಲಾಗಿತ್ತು. ಯಾರು ಆ ಸಂದರ್ಭದಲ್ಲಿ ಹೋರಾಟ ಮಾಡಿದರೋ ಅವರು ಮುಂದೆ ನಾಯಕರಾಗಿ ಹೊರ ಹೊಮ್ಮಿದ್ದಾರೆ .ಭಾರತದ ಪ್ರಜಾಪ್ರಭುತ್ವ ಮನೋಭಾವವನ್ನು ಬಲಪಡಿಸಲು ಸಾಧ್ಯವಿರುವ ಎಲ್ಲ ಕಾರ್ಯವನ್ನು ಮಾಡುವುದಾಗಿ ನಾವು ಪ್ರತಿಜ್ಞೆ ಮಾಡೋಣ ಎಂದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಡಾ. ಪರಶುರಾಮ ಪವಾರ, ಭಾಜಪಾ ಹಿರಿಯ ಮುಖಂಡ ಡಾ. ಎಸ್.ಪಿ, ವಡವಡಗಿ, ಚನ್ನಪ್ಟಕಂಠಿ, ಮಲಕೇಂದ್ರಗೌಡ ಪಾಟೀಲ, ಸಂಗಮ್ಮ ದೇವರಳ್ಳಿ, ಸರಸ್ವತಿ ಪೀರಾಪುರ ಮತ್ತಿತರರು ಉಪಸ್ಥಿತರಿದ್ದರು.
ಬ್ಯೂರೋ ರಿಪೋರ್ಟ್ :ಲಾಲಸಾಬ ಸವಾರಗೋಳ I Today news ವಿಜಯಪುರ