ಬಂಗಾಳಿ ನಟಿ ಐಂದ್ರಿಲಾ ಶರ್ಮಾ ತಮ್ಮ24ನೇ ವಯಸ್ಸಿಗೆ ಇಹಲೋಹ ತ್ಯಜಿಸಿದ್ದಾರೆ.ಮೆದುಳಿನ ಪಾರ್ಶ್ವವಾಯುವಿಗೆ ಒಳಗಾದ ನಟಿಯನ್ನ ನವೆಂಬರ್ 1ರಂದು ಆಸ್ಪತ್ರೆಗೆ ದಾಖಲಿಸಲಾಯಿತು.
ಅವರು ಇಂಟ್ರಾಕ್ರೇನಿಯಲ್ ರಕ್ತಸ್ರಾವದಿಂದ ಬಳಲುತ್ತಿದ್ದರು ಮತ್ತು ಎಡ ಫ್ರಂಟೊಟೆಂಪೊರೊಪಾರಿಟಲ್ ಡಿ-ಕಂಪ್ರೆಸಿವ್ ಕ್ರಾನಿಯೊಟೊಮಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಆಸ್ಪತ್ರೆಯ ಮೂಲಗಳ ಪ್ರಕಾರ, ಅವರು ಮಧ್ಯಾಹ್ನ 12:59ಕ್ಕೆ ನಿಧನರಾದರು.ವರದಿ ಪ್ರಕಾರ, ನಟಿಯ ಹೊಸ ಸಿಟಿ ಸ್ಮಾನ್ ವರದಿಗಳು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನ ತೋರಿಸಿದೆ ಎಂದು ವರದಿಯಾಗಿದೆ.