ಪಟ್ಟಣದಲ್ಲಿ ಹುಸೇನ ಬಾಷಾ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ಆಟವಿ ಖತಾಲ ಆಚರಿಸಲಾಯಿತು.
ಜಾತ್ರೆ ನಿಮಿತ್ಯ ಇಂಡಿ ಸೇರಿದಂತೆ ಕಲಬುರಗಿ, ವಿಜಯಪುರ, ಸೋಲಾಪುರ,ಪುನಾ,ಮುಂಬಯಿ ಮತ್ತು ಮಹಾರಾಷ್ಟç ಆಂಧ್ರದಿAದ ಅಂದಾಜು ೧೫ ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ತಮ್ಮ ಹರಕೆ ತೀರಿಸಿದರು.
ಹುಸೇನರು ಮಕ್ಕಾ ಮದೀನಾದ ಕರಬಲಾ ಮೈದಾನದಲ್ಲಿ ಹುತಾತ್ಮರಾದ ನಿಮಿತ್ಯ ಆಟವಿ ಖತಾಲ ಆಚರಿಸುವದು ಇಂಡಿಯ ಮೊಹರಮ್ ವಿಶೇಷ.
ಬೆಳಗ್ಗೆಯಿಂದ ಭಕ್ತಾದಿಗಳು ದರ್ಶನ ಮತ್ತು ನೈವೆದ್ಯ ಅರ್ಪಣೆಗೆ ಪ್ರಾರಂಭಿಸಿದ್ದರು. ಇಂಡಿಯ ದಾದಾಗೌಡರ ಮನೆ, ನಾಡಗೌಡ, ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರ ಮನೆಯಿಂದ ನೈವೆದ್ಯ ಮೆರವಣೆಗೆಯಲ್ಲಿ ಬಂದು ಸಲ್ಲಿಸಿದರು.
ಕರಬಲ್, ಭಡಂಗ ಕುಣಿತ, ಡೊಳ್ಳು, ಹುಲಿಕುಣಿತ, ಸೇರಿದಂತೆ ತಾಷಾ,ಬೆಂಡ ಒಳಗೊಂಡ ಕಾರ್ಯಕ್ರಮಗಳು ದೇವಸ್ಥಾನದ ಆವರಣದಲ್ಲಿ ನಡೆದವು.
ದರ್ಶನಕ್ಕೆ ಗದ್ದಲ ನಿಮಿತ್ಯ ಅರ್ಧ ಕಿ.ಮಿ ವರೆಗೂ ಸರದಿ ಮಾಡಲಾಗಿತ್ತು.
ಪೋಲಿಸ ಇಲಾಖೆ ಸಿಪಿಐ ರತನಕುಮಾರ ಜಿರಗಿಹಾಳ ಇವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ ಮಾಡಿದ ನಿಮಿತ್ಯ ಶಾಂತಿಯುವವಾಗಿ ಭಕ್ತರು ದರ್ಶನ ಪಡೆದರು.
ಮಂಗಳವಾರ ನಸುಕಿನ ೪ ಗಂಟೆಯ ವರೆಗೂ ದರ್ಶನ ಮುಂದು ವರೆಯಲಿದ್ದು , ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ನೇತೃತ್ವದಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆಯ ವ್ಯವಸ್ಥೆ ಮಾಡಲಾಗಿತ್ತು.
ಮಹಾರಾಷ್ಟç ಮತ್ತು ಆಂಧ್ರದಿAದ ಬಂದ ಭಕ್ತರಿಗೆ ದೇವಸ್ಥಾನದ ಆವರಣ ಮತ್ತು ಹಲವಾರು ಕಡೆ ಇರುವ ವ್ಯವಸ್ಥೆ ಮಾಡಲಾಗಿತ್ತು.
ಪುರಸಭೆ ಸದಸ್ಯ ಭೀಮನಗೌಡ ಪಾಟೀಲ, ಬಿಜೆಪಿ ಧುರೀಣ ಕಾಸುಗೌಡ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಸರದಿಯಲ್ಲಿ ನಿಂತು ದರ್ಶನ ಪಡೆದದ್ದು ವಿಶೇಷವಾಗಿತ್ತು.
ಮಂಗಳವಾರ ಬೆಳಗ್ಗೆ ದೇವರ ಮೆರವಣೆಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯುತ್ತದೆ.