ಆಧಾರ್ ಕಾರ್ಡ್ ದಾಖಲೆಗಳನ್ನು ಉಚಿತವಾಗಿ ಅಪ್ಡೇಟ್ ಮಾಡಲು ಡಿ.14ರವರೆಗೆ ಇದ್ದ ಅವಕಾಶವನ್ನು ಮೂರು ತಿಂಗಳು ವಿಸ್ತರಿಸಲಾಗಿದೆ. 2024ರ ಮಾರ್ಚ್ 14ರವರೆಗೆ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಬಹುದು ಎಂದು ಯುಐಡಿಎಐ ಸಂಸ್ಥೆ ತಿಳಿಸಿದೆ. ಇದರೊಂದಿಗೆ ಎರಡು ಬಾರಿ ಅವಧಿ ವಿಸ್ತರಣೆಮಾಡಿದಂತಾಗಿದೆ. ಈ ಹಿಂದೆ 2023ರ ಸೆಪ್ಟೆಂಬರ್ 14ಕ್ಕೆ ಡೆಡ್ಲೈನ್ ಇತ್ತು. ಅದನ್ನು ಡಿಸೆಂಬರ್ 14ಕ್ಕೆ ವಿಸ್ತರಿಸಲಾಯಿತು. ಈಗ ಡಿಸೆಂಬರ್ 15ರಿಂದ ಮಾರ್ಚ್ 14ರವರೆಗೆ ಗಡುವು ಹೆಚ್ಚಿಸಲಾಗಿದೆ.