ಮಹಾರಾಷ್ಟ್ರ ರಾಜ್ಯದ ಸಾತಾರ ಜಿಲ್ಲೆಯ ಕೃಷ್ಣಾ ನದಿಯ ಉಗಮಸ್ಥಾನ ಮಹಾಬಳೇಶ್ವರದಲ್ಲಿ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ನೂರಾರು ರೈತ ಭಾಂಧವರೊಂದಿಗೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ದಂಪತಿ ಸಮೇತ ತೆರಳಿ, ಪಂಚನದಿಗಳ ಸಂಗಮದ ಪುಣ್ಯಸ್ಥಳದಲ್ಲಿ ಹರಗುರುಚರಮೂರ್ತಿಗಳ ಸನ್ನಿಧಾನದಲ್ಲಿ ಕೃಷ್ಣಗೆ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪದೇಶ, ಮತ್ತು ತೆಲಂಗಾಣ, ನಾಲ್ಕು ರಾಜ್ಯಗಳ ರೈತರ, ನಾಗರಿಕರ, ಜೀವನಾಡಿಯಾದ ಕೃಷ್ಣಯ ಉಗಮಸ್ಥಾನದಲ್ಲಿ ಕಡ್ಲಿಗಾರ ಹುಣ್ಣಿಮೆ ಅಂದರೆ ಗುರುಪೌರ್ಣಿಮೆ ದಿವಸ 15 ವರ್ಷಗಳ ಕಾಲದಿಂದ ಈ ಭಾಗದ ರೈತರೊಂದಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕೊರೋನಾ ಮಹಾಮಾರಿ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ನಡೆದ ಗಲಭೆಯಿಂದ ಕಾರ್ಯಕ್ರಮವನ್ನು ಕೊಲ್ಹಾರ ಹಾಗೂ ಚಿಕ್ಕಸಂಗಮದಲ್ಲಿ ನಡೆಸಲಾಗಿತ್ತು.
ಈ ವರ್ಷ ಎಲ್ಲ ಕಂಟಕಗಳನ್ನು ಪಾರುಮಾಡಿದ ಕೃಷ್ಣಾ ನದಿಯ ಉಗಮಸ್ಥಾನದಲ್ಲಿಯೇ ಪೂಜೆ ನೆರವೇರಿಸಲು ನೂರಾರು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಆಗಮಿಸಿ ಪಾಲ್ಗೊಂಡಿರುವುದು ಸಂತಸದಾಯಕ ವಿಷಯವಾಗಿದೆ ಎಂದರು. ನಾನು ಪ್ರಥಮಬಾರಿಗೆ 1999ರಲ್ಲಿ ಶಾಸಕನಾದಾಗ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲರವರಿಗೆ ಸರಕಾರದಿಂದ ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ನಡೆಸಬೇಕೆಂದು ವಿನಂತಿ ಮಾಡಿದ್ದರ ಪ್ರಯುಕ್ತ ಪ್ರಪ್ರಥಮ ಬಾರಿಗೆ ಆಲಮಟ್ಟಿ ಆಣೆಕಟ್ಟಿಗೆ ಆಗಮಿಸಿ ಸರಕಾರದಿಂದ ಬಾಗೀನ ಆರ್ಪಿಸುವ ಪರಂಪರೆಗೆ ಚಾಲಣೆ ನೀಡಿದರು.
ಅದರಂತೆ ಸಾವಿತ್ರಿ, ಗಾಯತ್ರಿ, ಪಣಾ, ಕೊಯ್ಯಾ, ಕೃಷ್ಣಾ ಎಂಬ ಪಂಚನದಿಗಳು ಜನ್ಮತಾಳುವ ಮಹಾಬಳೇಶ್ವರ ಪುಣ್ಯಕ್ಷೇತ್ರದಲ್ಲಿಯೂ ಕೂಡ ಕೊರ್ತಿ ಕೊಲ್ದಾರ ಸೇತುವೆ ಪುನರ್ ನಿರ್ಮಾಣ ಹೋರಾಟ ಸಮೀತಿ ವತಿಯಿಂದ ಮಾಡುತ್ತಾ ಬಂದಿರುವದು ಜಲದೇವತೆಗೆ ರೈತರಿಂದ ನಡೆಯುವ ಮಹೋನ್ನತ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೊಲ್ಹಾರದ ಶೀಲವಂತ ಹಿರೇಮಠದ, ಕೈಲಾಸನಾಥ ಸ್ವಾಮಿಗಳು, ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಕಸ್ತೂರಿಬಾಯಿ ಬೆಳ್ಳುಬ್ಬಿ, ಪಟ್ಟಣ ಪಂಚಾಯತ ಸದಸ್ಯ ಅಪ್ಪಸಿ ಮಟ್ಯಾಳ, ರಮೇಶ ಕುಂಬಾರ, ಶೇಖಪ್ಪ ಗಾಣಿಗೇರ, ಕಲ್ಲೇಶ ಪರಗೊಂಡ, ಮುರಿಗೆಪ್ಪ ಬೆಳುಬ್ಬಿ, ರುದ್ರಪ್ಪ ಉಪ್ಪಲದಿನ್ನಿ, ಮುಂಡಲೀಕ ಬಾಟಿ, ರಾಜು ತುಂಬರಮಟ್ಟಿ, ರಮೇಶ ಮಮದಾಪೂರ, ಮಾಗೂ ಹಲವಾರು ಮಹಿಳೆಯರು ಸೇರಿದಂತೆ, ಸುತ್ತಮುತ್ತಲಿನ ಗಾಮಗಳಾದ ಬಳೂತಿ, ಹಣಮಾಪೂರ, ಮಸೂತಿ, ಮಟ್ಟಿಹಾಳ, ಬಸವನ ಬಾಗೇವಾಡಿ ಮನಗೂಳಿ, ಇನ್ನಿತರ ಗಾಮಗಳ ರೈತಮುಖಂಡರು ಪಾಲ್ಗೊಂಡಿದ್ದರು.
ವರದಿ: ಲಾಲಸಾಬ ಸವಾರಗೋಳ I Today News ವಿಜಯಪುರ