ಗೊಳಸಾರ ಮಠದ ಧಾರ್ಮಿಕ, ಅಧ್ಯಾತ್ಮಿಕ ಮತ್ತು ಜನಪರ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳು ಅನನ್ಯವೆಂದು ಶಿಬಿರದ ಸಂಚಾಲಕರಾದ ಬಿ.ಎಲ್.ಡಿ ಈ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸೆಯ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ.ಕೋಟೆಣ್ಣವರ
ಅವರು ವಿಜಯಪುರದ ಬಿ ಎಲ್ ಡಿ ಈ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ವತಿಯಿಂದ ಗೊಳಸಾರದ ಶ್ರೀ ಪುಂಡಲಿಗೇಶ್ವರ ಮಹಾಶಿವಯೋಗಿಗಳ ೪೫ ನೆಯ ಪುಣ್ಯಾರಾಧನೆ ಮಹೋತ್ಸವದ ನಿಮಿತ್ತ ಬ್ರಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರವನ್ನು ಅಭಿನವ ತ್ರಿಮೂರ್ತಿ ಶಿವಯೋಗಿಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅಭಿನವ ಪುಂಡಲಿAಗ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು.
ಈ ಶಿಬಿರದಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ರೋಗಿಗಳನ್ನು ಪರೀಕ್ಷಿಸಿ, ಉಚಿತವಾಗಿ ಔಷದೋಪಚಾರಗಳನ್ನು ಮಾಡಲಾಯಿತು.ಸುಮಾರು ೬೦ ಕಣ್ಣಿನ ಶಸ್ತç ಚಿಕಿತ್ಸೆ ಮತ್ತು ೫೦ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ರೋಗಿಗಳಿಗೆ ಬಿ ಎಲ್ ಡಿ ಈ ಆಸ್ಪತ್ರೆಗೆ ದಾಖಲಾಗಲು ಶಿಫಾರಸ್ಸು ಮಾಡಲಾಯಿತು.
೨೦ ಜನರು ಸ್ವಯಂಪ್ರೇರಿತವಾಗಿ ರಕ್ತದಾನ8 ಮಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಪೂಜಾರಿ ಸ್ವಾಗತಿಸಿ, ವಂದಿಸಿದರು. ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಪ್ರಶಾಂತ.ಧೂಮಗೊಂಡ, ಡಾ.ಶಿವಾನಂದ.ಮುಂಡೇವಾಡಿ, ಡಾ.ಅನಿಲಕುಮಾರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಪೂಜಾರಿ, ಆಶಾ ಕಾರ್ಯಕರ್ತೆಯರು, ಬಿ ಎಲ್ ಡಿ ಈ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ವಿಶ್ವನಾಥ.ಜಾಲವಾದಿ, ಡಾ.ಮಂಜುನಾಥ.ಸಾವಂತ, ಡಾ.ಮಹಾಂತೇಶ.ಮಂಟೂರ, ಸಿಬ್ಬಂದಿಗಳಾದ ರಮೇಶ.ಪಾಟೀಲ, ಶ್ರೀಶೈಲ.ಕುಂಬಾರ,ವಿಲಾಸ.ರಾಠೋಡ, ವಿಜಯ.ದೇಶಪಾಂಡೆ, ದ್ರಾಕ್ಷಾಯಿಣಿ.ಶಟಗಾರ, ಶ್ರೀಶೈಲ.ಅಗಸರ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಕಿರಿಯ ವೈದ್ಯರು ಪಾಲ್ಗೊಂಡಿದ್ದರು.
೧೯೮೯-೯೦ ಎಸ್ ಎಸ್ ಎಲ್ ಸಿ ಶ್ರೀ ಶಾಂತೇಶ್ವರ ಹೈಸ್ಕೂಲ ಗೆಳೆಯರ ಬಳಗದ ಉಮೇಶ.ಶಿವಯೋಗಿಮಠ, ಸುರೇಶ.ಅವರಾದಿ, ರಾಮಚಂದ್ರ.ಹೊಟಗಿ, ಶಾಂತು.ಧನಶೆಟ್ಟಿ, ರಾಜು.ಮೂರಜಾವದಮಠ ಭಾಗವಹಿಸಿದ್ದರು.