ಸೂರ್ಯನ ಬ್ಯಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬ್ಯಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ ಗಣೇಶ ಚತುರ್ಥಿ ಹಬ್ಬದಂದೇ ಗುಡ್‌ನ್ಯೂಸ್ ಕೊಟ್ಟಿದೆ. ಆದಿತ್ಯ ಎಲ್-1 ನೌಕೆ ಈಗಾಗಲೇ 4ನೇ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ. ಇದೀಗ ನಿಗದಿತ ಕಕ್ಷೆ (L1 ಪಾಯಿಂಟ್) ಸೇರುವುದಕ್ಕೂ ಮುನ್ನವೇ ವೈಜ್ಞಾನಿಕ ದತ್ತಾಂಶ ಕಳುಹಿಸಲು ಪ್ರಾರಂಭಿಸಿದೆ. ಈ ಕುರಿತು ಇಸ್ರೋ ತನ್ನ ಟ್ವಿಟ್ಟರ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.