ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಗೆ ಇಂದು ಮುದ್ದೇಬಿಹಾಳದ ಮಾದರಿ ಕಲ್ಯಾಣ ಮಂಟಪದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಶಾಸಕ ಸಿ. ಎಸ್. ನಾಡಗೌಡ ಚಾಲನೆ ನೀಡಿದರು. ನಾಡಿನ ಗೃಹಿಣಿಯರಿಗೆ ತುಂಬ ಆಸರೆಯಾಗಬಲ್ಲ ಈ ಗೃಹಲಕ್ಷ್ಮಿ ಯೋಜನೆಯ ಜಾರಿ ಮೂಲಕ ನಮ್ಮ ಸರ್ಕಾರ ಕೊಟ್ಟ ಮತ್ತೊಂದು ಗ್ಯಾರಂಟಿಯನ್ನೂ ಈಡೇರಿಸಿದಂತಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಸಾವಿರಾರು ಮಹಿಳೆಯರು, ವಿಧಾನಸಭಾ ಕ್ಷೇತ್ರದ ಮುಖಂಡರು, ಗಣ್ಯರು ಹಾಗೂ ಮಹಾಜನತೆ ಉಪಸ್ಥಿತರಿದ್ದರು.