ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ನೀಡಿದ್ದ ಗ್ಯಾರೆಂಟಿ ಯೋಜನೆ ಗೃಹಲಕ್ಷ್ಮಿ ಇಂದು ಮೈಸೂರಿನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಈ ಸಮಾರಂಭದ ಬಳಿಕ ಮನೆಯ ಯಜಮಾನಿ ಖಾತೆಗೆ ಇಂದೇ 2000 ಜಮೆ ಆಗಲಿದೆ. ಈ ಕುರಿತು ಸರ್ಕಾರ ಈಗಾಗಲೇ ಡಿಬಿಟಿಗೆ ವ್ಯವಸ್ಥೆ ಮಾಡಿಕೊಂಡಿದ್ದು ಮೊದಲ ಕಂತು ಇಂದೇ ಯಜಮಾನಿಯ ಕೈಗೆ ಸಿಗಲಿದೆ. ರಾಜ್ಯದಾದ್ಯಂತ ಸುಮಾರು 1.1 ಕೋಟಿ ಮಹಿಳೆಯರು ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ ಇಂದೇ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಲಿದೆ.