ತಾಲೂಕಿನ ಅಗರಖೇಡ ಗ್ರಾಮದ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರ ಮಕ್ಕಳಿಗೆ ನೀಡುತ್ತೀರುವ ಮದ್ಯಾಹ್ನ ಬಿಸಿ ಊಟದ ಜೊತೆಯಲ್ಲಿ ಗುಲಾಬ್-ಜಾಮೂನ ನೀಡಲಾಗುತ್ತಿದೆ. ವಾರದಲ್ಲಿ ಬೇರೆ ಬೇರೆ ರೀತಿಯ ರುಚಿಕರವಾದ ಜಾಮೂನ, ಇಡ್ಲಿ, ದೋಸೆ, ಮಸಾಲಾರೈಸ್, ಪುಲಾವ, ಹೀಗೆ ವಿಧ-ವಿಧವಾದ ಭೋಜನವನ್ನು ಇಲ್ಲಿ ಸರಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾವಿದೆ.
ನಮ್ಮ ಶಾಲೆಗೆ ಬರುವಂತಹ ವಿದ್ಯಾರ್ಥಿನಿಯರು ತುಂಬ ಬಡಕುಟುಂಬ ದಿಂದ ಬಂದವರಾಗಿದ್ದು ಆ ಮಕ್ಕಳ ಎಳ್ಗೆಗೋಸ್ಕರ ದಿನಾಲು ಶಾಲೆಗೆ ಬರುವಿಕೆಗಾಗಿ ಮಕ್ಕಳಲ್ಲಿ ಶಾಲೆಯ ಮೇಲೆ ಆಕರ್ಷಿಸಲು ಬಗೆ-ಬಗೆಯ ತಿಂಡಿ ತಿನುಸುಗಳು ಮಾಡಿಸಿ ಊಟಕ್ಕೆ ನೀಡುವುದರಿಂದ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಳವಾಗಿದೆ ಎಂದು ಶಾಲೆಯ ಮುಖ್ಯ ಗುರುಗಳು ಎಸ್ ಬಿ ರಾವಜಿ ಅವರು ಹೇಳಿದರು. ಇದರಿಂದ ಕಲಿಕೆಯಲ್ಲಿ ಪ್ರಗತಿ ಹೊಂದಲು ಅನುಕೂಲವಾಗಿತ್ತಿದೆ ಎಂದರು.
ಬಿ ಕೆ ಬಿರಾದಾರ, ಎಸ್ ಎ ಚಪ್ಪರಬಂದಿ, ಪಿ ಎಸ್ ಬಜಂತ್ರಿ, ಬಿ ಎಲ್ ಶಿವಶರಣ, ಪಿ ಬಿ ಕರತಮಳ, ಆರತಿ ಆಳೂರ, ಸುಜಾತ ಗಬಸಾವಳಗಿ, ಅರುಣ ಹೋಟಗಾರ, ಹಾಗೂ ಅಡುಗೆ ಸಿಬ್ಬಂದಿಗಳಾದ ಗಂಗಾಬಾಯಿ ಖೇಡ, ಶೀಲವಂತ ಕೋಕರೆ, ಮಲ್ಲಮ್ಮ ಸಿಂಗೆ, ಶ್ರೀದೇವಿ ಸುಬಾನಗೋಳ ಮತ್ತಿತರಿದ್ದರು. ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಶಾಲೆಯಲ್ಲಿ ಬಿಸಿಯೂಟದಲ್ಲಿ ಗುಲಾಬ ಜಾಮೂನ ಸೇವಿಸುತ್ತಿರುವ ಮಕ್ಕಳು
Thank you