ಪಟ್ಟಣವನ್ನು ಸ್ವಚ್ಚವಾಗಿಡುವ ಉದ್ದೇಶದಿಂದ ಪುರಸಭೆ ವತಿಯಿಂದ ಕಸ ವಿಲೇವಾರಿ ಮಾಡಲಾಗುತ್ತಿದ್ದು ಈ ಕಾರ್ಯಕ್ಕೆ ಜನತೆಯು ಪುರಸಭೆಯಿಂದ ತಿಳಿಸಿದಂತೆ ಒಣಕಸ ಹಸಿಕಸ ಹಾಗೂ ಹಾನಿಕಾರಕ ಕಸವನ್ನು ಪ್ರತ್ಯೇಕಿಸಿ ಪುರಸಭೆಯ ವಾಹನಗಳಿಗೆ ನೀಡಬೇಕು.
ಸಾರ್ವಜನಿಕರು ಕಸವನ್ನು ಗಟಾರ ಹಾಗೂ ರಸ್ತೆಗಳಿಗೆ ಚೆಲ್ಲದೆ ಮನೆಮನೆಗೆ ಬರುವ ಪುರಸಭೆಯ ವಾಹನಗಳಿಗೆ ನೀಡಿ ಪಟ್ಟಣವನ್ನು ಸ್ವಚ್ಚವಾಗಿಡಲು ಸಹಕಾರ ನೀಡಬೇಕು ಎಂದು ಪುರರಸಭೆ ಮುಖ್ಯಾಧಿಕಾರಿ ಕೆ ಎಸ್۔ ಲಕ್ಷ್ಮೀಶ ಹೇಳಿದರು. ಪುರಸಭೆ ವತಿಯಿಂದ ಶ್ರೀ ಶಾಂತೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಹರಾ ಗೀಲಾ ಸುಖಾ ನೀಲಾ ಅಭಿಯಾನದಲ್ಲಿ ಸಾರ್ವಜನಿಕರಲ್ಲಿ ಮತ್ತು ಶಾಲಾ ಮಕ್ಕಳಿಗೆ ಮೂಲದಲ್ಲಿಯೇ ಹಸಿಕಸ ಒಣಕಸ ತ್ಯಜ್ಯವಿಂಗಡನೆ ಕುರಿತು ಸಫಾಯಿ ಕಾರ್ಮಿಕರ ಸಹಯೋಗದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ ಯಲ್ಲಪ್ಪ ಹದರಿ ಸದಸ್ಯರಾದ ಬುದ್ದುಗೌಡ ಪಾಟೀಲ ಶ್ರೀಶೈಲಗೌಡ ಪಾಟೀಲ ಹಿರಿಯ ಆರೋಗ್ಯ ನಿರೀಕ್ಷಕ ನಜೀರ ಮುಲ್ಲಾ ಕಿರಿಯ ಆರೋಗ್ಯ ನಿರೀಕ್ಷಕ ಎಲ್ ಎಸ್۔ ಸೋಮನಾಯಕ ಶ್ರೀಶೈಲ ಹಾದಿಮನಿ ಕಿರಣ ಸಿಂಧೆ ರಾಜಗುರು ದೇವರ ಸಂಜು ಇತರರು ಉಪಸ್ಥಿತರಿದ್ದರು.