ಕೌಟುಂಬಿಕ ಕಲಹದಿಂದ ಇತ್ತೀಚಿಗೆ ಮದುವೆಯಾಗಿದ್ದ ವರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಉಳ್ಳಾಲದ ಎಂ ವಿ ಲೇಔಟ್ ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ಮಹೇಶ್ವರ್ (25) ಎಂಬಾತ 3 ತಿಂಗಳ ಹಿಂದೆ ಕವನ ಎಂಬ ಯುವತಿಯೊಂದಿಗೆ ವಿವಾಹವಾಗಿದ್ದ. 5 ದಿನಗಳ ಹಿಂದೆ ಮಹೇಶ್ವರ್ ತಮ್ಮಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಕವನ ಪತಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದು, ಆಕೆಯ ಕಿರುಕುಳದಿಂದ ಮಹೇಶ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.ಇದರ ಜೊತೆ ಪತ್ನಿ ವಿಲಾಸಿ ಜೀವನ ಬಯಸಿ ಕಿರುಕುಳ ನೀಡುತ್ತಿದ್ದಳು ಎನ್ನಲಾಗ್ತಿದೆ.