ಭೀಮ ಆರ್ಮಿ ಭಾರತ ಏಕತಾ ಮಿಶನ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ವಿನಯ ರತಸಿಂಗ ಅವರ ಸಲಹೆ ಮೇರೆಗೆ ಕೋಲಾರ ಜಿಲ್ಲೆಗೆ ಭೇಟಿ ನೀಡಿ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಉಳೇರಹಳ್ಳಿ ಗ್ರಾಮದಲ್ಲಿ ದಿನಾಂಕ 8/9/2022 ರಂದು ಅದೇ ಗ್ರಾಮದ ಬೋತ್ಯಾಮ ದೇವಿಯ ಕೋಲು ಮುಟ್ಟಿದ ಎಂಬ ಕಾರಣಕ್ಕೆ ದಲಿತ ಬಾಲಕನೊಬ್ಬನನ್ನು ಗ್ರಾಮದ ಸವಣಿ೯ಯರು ಹಲ್ಲೆ ಮಾಡಿ 60000 ಸಾವಿರ ದಂಡ ವಿಧಿಸಿದ್ದಾರೆ ದಂಡ ಕೂಡಲು ಆಗದಿದ್ದರೆ ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದಾರೆ ಈ ವಿಷಯ ತಿಳಿದ ನಾವು ಇಂದು ಕೋಲಾರ ಜಿಲ್ಲೆಯ ಉಳ್ಳೇರಹಳ್ಳಿಯ ಬಾಲಕನ ಕುಟುಂಬಕ್ಕೆ ಭೇಟಿ ನೀಡಿ ರಾಷ್ಟ್ರೀಯ ಅಧ್ಯಕ್ಷರಾದ ವಿನಯ ರತಸಿಂಗ ಅವರಿಗೆ ವಿಡಿಯೋ ಕಾಲ ಮುಖಾಂತರ ಸಂಪರ್ಕಿಸಿದರು ಮತ್ತು ಬಾಲಕನ ಕುಟುಂಬಕ್ಕೆ ನ್ಯಾಯ ದೂರಕಿಸಿ ಕೂಡುವ ಭರವಸೆ ನೀಡಿದರು ನಂತರ ನಾವು ಸಂತ್ರಸ್ತ ಕುಟುಂಬಕ್ಕೆ ಸಂವಿಧಾನ ಪುಸ್ತಕ ನೀಡಿ ಸಾಂತ್ವನ ಹೇಳಿ ನಾವು ನಿಮ್ಮ ಜೂತೆಗೆ ಇರತೇವೆ ಭಯ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಲಾಯಿತು.
ಈ ಸಂದರ್ಭದಲ್ಲಿ ಹೊಸಕೋಟೆ ತಾಲ್ಲೂಕ ಅಧ್ಯಕ್ಷರಾದ ಮುತ್ತು ರಾವಣ, ತಾಲ್ಲೂಕ ಉಪಾಧ್ಯಕ್ಷರಾದ ಶ್ರೀಕಾಂತ್ ರಾವಣ, ಹಾಸನ ಜಿಲ್ಲಾ ಅಧ್ಯಕ್ಷರಾದ ಪ್ರದೀಪ್ ಭೀಮ ಆರ್ಮಿ ಮಾಲೂರ ತಾಲ್ಲೂಕ ಸಮಿತಿ ಹಾಗು ಭೀಮ ಆರ್ಮಿ ಕಾರ್ಯಕರ್ತರು ಉಪಸ್ಥಿತರಿದ್ದರು