ಸಿಂದಗಿ : ಅಕ್ಷರ ದಾಸೋಹ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೊಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶರಣಪ್ಪ ದೊಡ್ಡಪ್ಪ ಬಿದನೂರನ್ನು ಅಮಾನತ್ತುಗೊಳಿಸಿ ಕ್ಷೇತ್ರ ಶಿಕ್ಷಣ ಅಧಿಕಾರಿ M.H ಹರನಾಳ ಆದೇಶಿಸಿದ್ದಾರೆ.
ಇನ್ನು ಅಂದಾಜು 44900 ಮೌಲ್ಯದ ಆಹಾರ ಸಾಮಗ್ರಿಗಳನ್ನು ಬೇರೆ ಕಡೆಗೆ ಸಾಗುತ್ತಿರುವುದು ಸಾಬೀತಾಗಿದೆ ಅದಕ್ಕಾಗಿ ಮುಖ್ಯಶಿಕ್ಷಕ ಶರಣಪ್ಪ ದೊಡ್ಡಪ್ಪ ಬಿದನೂರನ್ನು ಕ್ಷೇತ್ರಶಿಕ್ಷಣಾಧಿಕಾರಿ M.H ಹರನಾಳ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.