ಇಂಡಿ : ದಿನಾಂಕ 26.5.23ರಂದು ಹಂಜಗಿ ಗ್ರಾಮದಲ್ಲಿ ಹಾಲುಮತ ಸಮುದಾಯದ ದಾಯಾದಿಗಳ ನಡುವೆ ವೈಯಕ್ತಿಕ ಕಾರಣಕ್ಕಾಗಿ ಜಗಳ ನಡೆದಿದ್ದು, ಇಬ್ಬರು ವ್ಯಕ್ತಿಗಳು ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿಗದ್ದಾರೆ.ಆದರೆ ನಾನು ದಿನಾಂಕ 24.5.23ರಂದು ರಾಜ್ಯ ಜೆಡಿಎಸ್ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಪಾಲ್ಗೊಂಡು ದಿನಾಂಕ 26.5.23 ರಾತ್ರಿ ಹಂಜಗಿ ಗ್ರಾಮಕ್ಕೆ ಬಂದಿದ್ದು,ಈ ಜಗಳಕ್ಕೆ ಸಂಬಂಧಿಸಿದ ವಿಷಯವಾಗಲಿ ಹಾಗೂ ಜಗಳಕ್ಕೆ ಪ್ರಚೋದನೆ ನೀಡುವಲ್ಲಿ ನನ್ನ ಪಾತ್ರವಿಲ್ಲ,ಆದರೆ ಪಟ್ಟಭದ್ರ ಹಿತಾಸಕ್ತಿಗಳು ನನ್ನ ಹೆಸರು ಹಾಗು ವೈಯಕ್ತಿಕವಾಗಿ ತೇಜೋವಧೆ ಮಾಡುವ ಪ್ರಯತ್ನ ಇಂಡಿ ಮತಕ್ಷೇತ್ರದಲ್ಲಿ ನಡೆದ್ದಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು.
ನನ್ನ 25 ವರ್ಷಗಳಕಾಲ ಬಡವರ ರೈತರ ಕಾರ್ಮಿಕರ ದಿನದಲಿತರ ಹಿಂದೂಳಿದ ಅಲ್ಪಸಂಖ್ಯಾತರ ಹಾಗೂ ತಾಲೂಕಿನ ಸಮಸ್ತ ನಾಗರೀಕರ ಮದ್ಯ ನನ್ನ ಸಾರ್ವಜನಿಕ ಜೀವನ ತೆರದ ಪುಸ್ತಕ ವಿದ್ದಿದ್ದು ಪ್ರತಿಯೂಬ್ಬರು ತಿಳಿದ ವಿಷಯ.ಚುನಾವಣೆ ಹಾಗೂ ರಾಜಕೀಯದಲ್ಲಿ ಸೋಲು ಗೆಲುವು ರಾಜಕಾರಣಿಗಳಿಗೆ ಹೂಸದೇನಲ್ಲ ನಾನು ಕೂಡಾ 15ವರ್ಷಗಳಕಾಲ ಜನಪ್ರತಿನಿಧಿಯಾಗಿ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.ಆದರೆ ಇಂದು ಯಾರೂ ಕಿಡಿಗೇಡಿಗಳು ನನ್ನ ವೈಯಕ್ತಿಕ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ ಆದರೆ ಇದು ಸಾಧ್ಯವಿಲ್ಲ.ನನ್ನ ಕಾರ್ಯಕರ್ತರ ಸಂಗಡ ಚರ್ಚಿಸಿ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇನೆ ಎಂದು ನೊಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರ ಇಂಡಿ ನಗರದ ವೃತನಿರಕ್ಷ ಕಚೇರಿಯಲ್ಲಿ ಸಿ ಪಿ ಐ ಮಹಾದೇವ ಶಿರಹಟ್ಟಿಯವರಿಗೆ ಮನವಿ ಮಾಡಿ ಸೂಕ್ತ ನ್ಯಾಯ ಒದಗಿಸಬೇಕು ಎಂದು ಕಳಕಳಿಯ ಮನವಿ ಸಲ್ಲಿಸಿದರು.ಇದೆ ಸಂದರ್ಭದಲ್ಲಿ.ಜೆಡಿಎಸ್ ಮುಖಂಡರಾದ ಸಿದ್ದಪ್ಪ ಗುನ್ನಾಪೂರ, ಮುತ್ತಪ್ಪ ಪೋತೆ, ಮರೇಪ್ಪ ಗಿರಣಿವಡ್ಡರ ಶ್ರೀಶೈಲಗೌಡ ಪಾಟೀಲ ಸಿದ್ದು ಡಂಗಾ, ರೇವಣಸಿದ್ದ ಗೋಡಕೆ, ಮುತ್ತಪ್ಪ ಚಿಕ್ಕಬೇವನೂರ, ವಿಠ್ಠಲ ಹಂಜಗಿ,ಚಾಂದ ಶೇಖ್, ಬಸವರಾಜ ಹಂಜಗಿ, ಮಹಿಬೂಬ ಬೇವನೂರ, ಎಚ್ ಜಿ ಹಂಜಗಿ,ಬಾಬು ಮೇತ್ರಿ, ರಾಜು ಮುಲ್ಲಾ ನಿಯಾಝ್ ಅಗರಖೇಡ ಇರ್ಫಾನ್ ಅಗರಖೇಡ ಫಜಲು ಮುಲ್ಲಾ ದುಂಡು ಬಿರಾದಾರ, ಸುದರ್ಶನ್ ಉಪಾಧ್ಯಾಯ, ಬಾಳು ರಾಠೋಡ, ರಾಜು ಬನಗೋಂಡೆ, ನಾರಾಯಣ ವಾಲಿಕಾರ, ಭೀಮಣ್ಣ ಕೋಳಿ, ಗೋಪಾಲ ಸೂರಪೂರ, ರಫೀಕ್ ಸೋಡೆವಾಲೆ,ರವಿ ಶಿಂದೆ,ಮಳಗು ಪೂಜಾರಿ, ವಿಠ್ಠಲ ಹಳ್ಳಿ, ಚಂದ್ರಯ್ಯ ಮಠಪತಿ, ಉಮೇಶ ಹಲಸಂಗಿ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು