ರೈತರು ಸಬಲರಾದರೆ ಗ್ರಾಮಗಳು ಸಬಲರಾಗುತ್ತವೆ ಎಂದು ಕೃಷಿ,ತೋಟಗಾರಿಕೆ, ಪಶುಸಂಗೋಪನೆಯಲ್ಲಿ ನೆರವಾಗಲು ಸರಕಾರ ಕೃಷಿ ಸಖಿಯರನ್ನು ನೇಮಿಸಿದ್ದು ಕೃಷಿ ಸಖಿಯರಿಂದ ಸರಿಯಾದ ಮಾಹಿತಿ ಪಡೆದು ರೈತರು ಕೃಷಿಯಲ್ಲಿ ಸಬಲರಾಗಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನ ಜಿ.ಪ್ರಕಾಶ ಹೇಳಿದರು.
ಅವರು ತಾಲೂಕಿನ ತಾಂಬಾ ಗ್ರಾಮದ ರಾಷ್ಟç ಪ್ರಶಸ್ತಿ ವಿಜೇತ ರೈತ ಭೀರಪ್ಪ ಇವರ ತೋಟದಲ್ಲಿ ಇಂಡಿ ಮತ್ತು ಚಡಚಣ ತಾಲೂಕಿನ ೪೦ ಜನ ಕೃಷಿ ಸಖಿಯರಿಗೆ ವಿವಿಧ ರೀತಿಯ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರದಿAದ ಆಯೋಜಿಸಿರುವ ಐದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತ ಭೀರಪ್ಪ ವಗ್ಗಿ ಮಾತನಾಡಿ ಕೃಷಿ ಚಟುವಟಿಕೆಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಕೃಷಿ ಮೌಲ್ಯ ಸರಪಳಿಯ ಅಭಿವೃದ್ಧಿಗಾಗಿ ಕೃಷಿ ಸಖಿ ಕಾರ್ಯನಿರ್ವಹಿಸುತ್ತಿರುವದು ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ದುಂಡಪ್ಪ ಮುಂಜಿ,ಬಸಪ್ಪ ವಗ್ಗಿ,ಪದಮಣ್ಣ ವಗ್ಗಿ,ಹಣಮಂತ ಮಾಳಗೊಂಡ ಮತ್ತಿತರಿದ್ದರು.
೪೦ ಕನ ಕೃಷಿ ಸಖಿಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.