ದಿನಾಂಕ-25/03/2023 ರಂದು ಮಧ್ಯಾಹ್ನ ಇಂಡಿ ತಾಲೂಕಿನ ಹಡಲಸಂಗ ಗ್ರಾಮದ ಅಣ್ಣಾರಾಯ ಶ್ರೀಶೈಲ ಪೂಜಾರಿ ಇತನು ತನ್ನ ಮನೆಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ತಾಬಾ ಹೊಂದಿ ಸಂಗ್ರಹಿಸಿದ ಸಮಯದಲ್ಲಿ ಅಬಕಾರಿ ದಾಳಿ ಮಾಡಿ 14 ಲೀಟರ್ ಮದ್ಯವನ್ನು ಜಪ್ತುಪಡಿಸಿಕೊಂಡು ಅಣ್ಣಾರಾಯ ಶ್ರೀಶೈಲ ಪೂಜಾರಿ ವಯಾ-32 ವರ್ಷ, ಜಾತಿ:ಹಿಂದೂ ಹೂಗಾರ ಸಾ||ಹಡಲಸಂಗ ತಾ||ಇಂಡಿ ಇತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಎಂ ಎಚ್ ಪಡಸಲಗಿ ಅಬಕಾರಿ ನಿರೀಕ್ಷಕರು ಇಂಡಿ ವಲಯ ರವರು ಪ್ರಕರಣವನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಶಿವಶಂಕರ ಗೋಟ್ಯಾಳ ಹಾಗೂ ಮಂಜುನಾಥ ಬಡಿಗೇರ, ಭೀಮರಾಯ ತಳವಾರ ದಾಳಿಯಲ್ಲಿ ಪಾಲ್ಗೊಂಡಿದರು. ಅಂತಾ ಎಂ ಎಚ್ ಪಡಸಲಗಿ ಅಬಕಾರಿ ನಿರೀಕ್ಷಕರು ಇಂಡಿ ವಲಯ ರವರು ತಿಳಿಸಿರುತ್ತಾರೆ.ಸದರಿ ವರದಿಯನ್ನು ಪತ್ರಿಕಾ ಪ್ರಕಟಿಣೆಗಾಗಿ ಕೋರಲಾಗಿದೆ.