ಆರೋಪಿತನಾದ ಸಂತೋಷ ತಂ.ರಾಮು ರಾಠೋಡ, ಸಾ|| ಹಂಜಗಿ ತಾಂಡಾ ಈತನು ದಿ : 27-07-2018 ರಂದು ರಾತ್ರಿ 08-30 ಗಂಟೆ ಸುಮಾರಿಗೆ ಇಂಡಿ ತಾಲೂಕಿನ ಹಂಜಗಿ ತಾಂಡಾದಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿರುವಾಗ ದಾಳಿ ಮಾಡಿದಾಗ ಒಟ್ಟು 6 ಲೀಟರ್ ಸೇಂದಿಯನ್ನು ಸಿಬ್ಬಂದಿಯೊಂದಿಗೆ ಅಬಕಾರಿ ಉಪನಿರೀಕ್ಷಕರಾದ ಶ್ರೀ ಸುನೀಲ ಕಲ್ಲೂರ ಇವರು ಆರೋಪಿತನಿಗೆ ದಸ್ತಗಿರಿ ಮಾಡಿ ಆರೋಪಿತನ ಮೇಲೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32(1) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ನಂತರ ಸದರಿ ಪ್ರಕರಣವನ್ನು ಶ್ರೀ ಡಿ.ಬಿ.ಕ್ಷೌರದ, ಅಬಕಾರಿ ಉಪನಿರೀಕ್ಷಕರು, ಇಂಡಿ ಇವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅದರಂತೆ ಮಾನ್ಯ ಸಿ.ಜೆ. & ಜೆ.ಎಂ.ಎಫ್.ಸಿ.ನ್ಯಾಯಾಲಯ, ಇಂಡಿಯ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಈಶ್ವರ ಎಸ್.ಎಮ್. ಇವರು ಸದರಿ ಪ್ರಕರಣದ ವಾದ ವಿವಾದಗಳನ್ನು ಆಲಿಸಿ ಆರೋಪಿತನಿಗೆ ಕರ್ನಾಟಕ ಅಬಕಾರಿ ಕಾಯ್ದೆ ಕಲಂ : 32(1) ರ ಪ್ರಕಾರ 1 ವರ್ಷ ಕಠಿಣ ಕಾರಾಗೃಹ (ಜೈಲು) ಶಿಕ್ಷೆ ಹಾಗೂ ರೂ.10,000=00 ಮತ್ತು ದಂಡ ಭರಿಸದಿದ್ದರೆ 6 ತಿಂಗಳ ಹೆಚ್ಚುವರಿಯಾಗಿ ಕಾರಾಗೃಹ ಶಿಕ್ಷೆ ವಿಧಿಸಿ ದಿನಾಂಕ : 17-02-2023 ರಂದು ತೀರ್ಪು ನೀಡಿರುತ್ತಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಇಬ್ರಾಹಿಂ ತಂ.ಖಾದರಸಾಬ ಗಟ್ಟಿಮಹಲ ಇವರು ವಾದ ಮಂಡಿಸಿದ್ದರು.