ವಿಜಯಪುರ: 10 ಸಾವಿರ ಹಣಕ್ಕಾಗಿ ಸಾಯುವಂತೆ ಇಬ್ಬರು ಪ್ರಚೋದನೆ ನೀಡಿದ ಹಿನ್ನೆಲೆ ಓರ್ವ ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ವಿಜಯಪುರ ತಾಲ್ಲೂಕಿನ ಬರಟಗಿ ತಾಂಟದ ಬಳಿ ನಡೆದಿದೆ. 40 ವರ್ಷದ ರಾಮು ಧನಸಿಂಗ್ ಪವಾರ ಮೃತಪಟ್ಟಿರುವ ದುರ್ದೈವಿ. ಇನ್ನು ಸುರೇಶ ಲಕ್ಷ್ಮಣ ರಾಠೋಡ, ಅನಿಲ ಕಿಸನ್ ರಾಠೋಡ ಪ್ರಚೋದನೆ ನೀಡಿರುವ ಆರೋಪಿಗಳು. ಸುರೇಶ ಕಡೆಗೆ ರಾಮು 10 ಸಾವಿರ ಮುಂಗಡವಾಗಿ ಸಾಲಮಾಡಿಕೊಂಡಿದ್ದನು. ಆದ್ರೇ, ಸುರೇಶ 10 ಸಾವಿರ ಹಣ ನೀಡುವಂತೆ ಪದೇ ಪದೇ ಕಿರುಕುಳ ನೀಡಿದ್ದನು.ಈ ವಿಚಾರಕ್ಕಾಗಿ ರಾಮು ಮನೆಗೆ ತೆರಳಿದ ಸುರೇಶ, ಅನಿಲ ಆತನ ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಹಣ ನೀಡುವಂತೆ ಕಿರುಕುಳ ನೀಡಿದ್ದು, ಇಲ್ವೇ ಸಾಯುವಂತೆ ಪ್ರಚೋದನೆ ನೀಡಿದ್ದಾರೆ. ಅದಕ್ಕಾಗಿ ರಾಮು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಧನಸಿಂಗ್ ಪವಾರ ತಿಳಿಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.