ಇಂಡಿಯ ಬ್ರಲಿಂಟ ಸ್ಕೂಲ ನಲ್ಲಿ 2024-25ನೇ ಸಾಲಿನ ನೂತನ ಆಡಳಿತ ಮಂಡಳಿಯೊಂದಿಗೆ ಶಾಲಾ ಪ್ರಾರಂಭೋತ್ಸವ ಹಾಗೂ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಉಲ್ಮಾ ಕಮಿಟಿ ಅಧ್ಯಕ್ಷರು ಮುಪ್ತಿ ಅಬ್ದುಲ್ ರಹಮಾನ್ ಅರಬ್, ಶ್ರೀ ಶ್ರೀ ಅಭಿನವ ರಾಚೋಟೆಶ್ವರ್ ಮಹಾಸ್ವಾಮಿಗಳು ಹಾಗೂ ಕಂದಾಯ ಉಪ ವಿಭಾಗಾಧಿಕಾರಿ ಶ್ರೀ ಆಬೀದ ಗದ್ಯಾಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮೊಹಮ್ಮದ್ ಮುಸ್ತಾಕ್ ಅಮೀನೂದ್ದಿನ ನಾಯ್ಕೋಡಿ ವಹಿಸಿದರು. ಶ್ರೀ ಆಬೀದ ಗದ್ಯಾಳ ಅವರು ಮಕ್ಕಳ ಮೌಲ್ಯಗಳ ಕುರಿತು ಮಾತನಾಡಿ, ಇವತ್ತಿನ ಕಾಲದಲ್ಲಿ ಮಕ್ಕಳಿಗೆ ಬೆಳೆಸಬೇಕಾದ ನೈತಿಕತೆ ಹಾಗೂ ಸಂಸ್ಕಾರಗಳ ಬಗ್ಗೆ ಸಲಹೆ ನೀಡಿದರು.
ಅದೇ ರೀತಿಯಾಗಿ, ಶ್ರೀ ದಾದಾ ಶಾಮನ್ನವರ ಅವರು ಇಂದಿನ ಮಕ್ಕಳು ಮೊಬೈಲ್ ನಿಂದ ಹೆಚ್ಚು ಪ್ರಭಾವಿತರಾಗಿರುವುದು ಮತ್ತು ಅದರ ನಕಾರಾತ್ಮಕ ಪರಿಣಾಮಗಳ ಬಗ್ಗೆ ಮಾತನಾಡಿದರು.
ಶಾಲೆಯ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಾಕ್ ಅಮೀನೂದ್ದಿನ ನಾಯ್ಕೋಡಿ ಅವರು ಶಾಲೆಯ ಹಿಂದಿನ ಸಾಧನೆಗಳನ್ನು ಮೆಚ್ಚಿದರು ಹಾಗೂ ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣದ ಕ್ಷೇತ್ರದಲ್ಲಿ ನಿರಂತರ ಶ್ರಮಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಎಚ್.ಕೆ. ನಾಯ್ಕೋಡಿ, ಎಂ.ಎಸ್. ಕಂಬಾರ್ ಹಾಗೂ ಸಹ ಶಿಕ್ಷಕರಾದ ಎಸ್.ಎಂ. ಬಳಗಾರ, ವಾಣಿ ಪತ್ತಾರ್ ಉಪಸ್ಥಿತರಿದ್ದರು.
ಅಗ್ನಿಶಾಮಕ ಅಧಿಕಾರಿಗಳು ಜೆ.ಎಂ. ತೇಲಿ, ಮಂಜುನಾಥ್ ನಾಯ್ಕೋಡಿ, ಅಲ್ತಾಫ್ ಮುಜಾವರ್, ರಫೀಕ್ ಬಗಲಿ, ಅಬೂಬಕರ್ ನಾಯ್ಕೋಡಿ, ಹುಸೇನ್ ಸಾಬ್ ನಾಯ್ಕೋಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.