ನಿಂಬೆ ನಾಡು ಇಂಡಿ ಪಟ್ಟಣಕ್ಕೆ ಹಾರ್ದಿಕ ಸ್ವಾಗತ. “75ನೇ ಸ್ವತಂತ್ರ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಸ್ವಾಗತ ಬಾಗಿಲು ನಿರ್ಮಿಸಿದ್ದು ಕಾರ್ಯ ಶ್ಲಾಘನಿಯವಾಗಿದ್ದು.” ಪಟ್ಟಣದ ವಿಜಯಪುರ ರಸ್ತೆಯ ಹುಡ್ಕೋ ಕಾಲೋನಿ ಹತ್ತಿರ ಲೋಕೋಪಯೋಗಿ ಇಲಾಖೆಯವರು 75 ನೇ ಸ್ವಾಂತಂತ್ರ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಿರ್ಮಿಸಿದ ಸ್ವಾಗತ ಕಮಾನ ವನ್ನು ಇಂಡಿ ಶಾಸಕರಾದ ಮಾನ್ಯ ಶ್ರೀ. ಯಶವಂತರಾಯಗೌಡ ವ್ಹಿ. ಪಾಟೀಲ ರವರು ಉದ್ಘಾಟಿಸಿ ಮಾತನಾಡಿದರು.
ಒಳ್ಳೆಯ ಗುಣಮಟ್ಟದ ಉತ್ಕೃಷ್ಟವಾದ ನಿಂಬೆ ಬೇಳೆಯುವಲ್ಲಿ ಇಂಡಿ ಅಗ್ರಗಣ್ಯವಾಗಿದ್ದು ದೇಶ ವಿದೇಶಗಳಲ್ಲಿ ಕೂಡ ನಮ್ಮ ನಿಂಬೆಗೆ ಬಹು ಬೇಡಿಕೆ ಇದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬನ್ನಮ್ಮ ಹದರಿ , ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ , ತಹಶೀಲ್ದಾರ್ ನಾಗಯ್ಯ ಹೀರೆಮಠ , ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ , ತಾಪಂ ಇಒ ಸುನಿಲ ಮುದ್ದಿನ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ಮಠ , ಪುರಸಭೆ ಮುಖ್ಯಾಧಿಕಾರಿ ಕೆ.ಎಸ್ ಲಕ್ಷ್ಮೀಶ, ಅಪ್ಪಾಸಾಹೇಬ ತಾಂಬೆ , ಇದ್ದರು .