ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸಿಂಧಗಿ ರಸ್ತಯಲ್ಲಿರುವ ಶ್ರೀಮತಿ ಸರೋಜಿನಿ ಚಂದ್ರಕಾಂತ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ರೈತರಿಗಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜೈ ಕಿಸಾನ್ “ಸನ್ಮಾನ” ಗೊಬ್ಬುರವನ್ನು ಉದ್ಘಾಟಿಸಿ ಮಾತನಾಡಿದ ಇಂಡಿ ಜನಪ್ರಿಯ ಶಾಸಕರಾದ ಶ್ರೀಯುತ. ಯಶವಂತರಾಯಗೌಡ ವ್ಹಿ.ಪಾಟೀಲ, ಕಂಪನಿ ಅವರು ರೈತರ ಸಲುವಾಗಿ ಅವರ ಬೇಡಿಕೆಯಾದ “ಜೈ – ಕಿಸಾನ್” ಕಂಪನಿಯ ರಸಗೊಬ್ಬರಗಳನ್ನು ಇಂಡಿ ಭಾಗದ ರೈತರಿಗೆ ಸರಿಯಾದ ಸಮಯದಲ್ಲಿ ದೊರೇಕಿಸುವಂತೆ ಹಾಗೂ ನಾವೆಲ್ಲರೂ ಒಟ್ಟುಗುಡಿ ರೈತರ ಆದಾಯವನ್ನು ಹೆಚ್ಚಿಸುವುದರ ಬಗ್ಗೆ ಉದ್ದೇಷಿಸಿ ಮಾತನಾಡಿದರು.
ಅದೆ ರೀತಿಯಾಗಿ ರೈತರ ಆದಾಯವನ್ನು ಹೆಚ್ಚಿಸುವವಲ್ಲಿ ವಿತರಕ ಮಿತ್ರರ ಸಹಾಯ ಹಾಗೂ ಮುಖ್ಯ ಪಾತ್ರವಾಗಿದೆ ಎಂದು ತಿಳಿಸಿದರು.
ಅದೆ ರೀತಿಯಾಗಿ ರೈತರ ಆದಾಯವನ್ನು ಹೆಚ್ಚಿಸುವಲ್ಲಿ “ಜೈ – ಕಿಸಾನ್” ಕಂಪನಿಯು ೧೯೭೨ ರಿಂದ ಶ್ರಮಿಸುತ್ತಿದೆ ಮತ್ತು ಕಂಪನಿಯಲ್ಲಿರುವ ರಸಗೊಬ್ಬರಗಳ ಪಟ್ಟಿಯಲ್ಲಿ “ಸನ್ಮಾನ”(14:28:14) ರಸಗೊಬ್ಬರಗಳನ್ನು ಸೇರಿಸಿ ಅದರ ಉದ್ಘಾಟನೆಯನ್ನು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನೆರವೇರಿಸಿದ್ದಕ್ಕೆ ಸಂತೋಷವನ್ನು ವ್ಯಕ್ತಪಡಿಸಿ “ಸನ್ಮಾನ”(14:28:14) ಇನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಮುಟ್ಟಲಿ ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ವಲಯ ವ್ಯವಸ್ಥಾಪಕರಾದ
⚡ಪ್ರಕಾಶ ರೇಡ್ಡಿ
⚡ವಿಷ್ಣುವರ್ಧನ್ ರೇಡ್ಡಿ
⚡ಮಹೇಶ ಹಾವಿನಾಳ
⚡ಭಿಮುದಾದಾ ಭಿರಡೆ
ಸಂದೀಪ ಬಿರಾದಾರ, ಮಚಿಂದ್ರ ಜಗಶೆಟ್ಟಿ, ಸಂಗಮೇಶ್ ಚೌಧರಿ ಅವರು ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ನಡೆಸಿಕೊಡಲು ಸಹಾಯವನ್ನು ಮಾಡಿದ ಎಮ್. ಸಿ. ಧನಶೆಟ್ಟಿ ಅಂಗಡಿಯ ಮಾಲಿಕರಾದ
ಶ್ರೀ. ಮಹಾವೀರ ಧನಶೆಟ್ಟಿ ಅವರಿಗೆ ಧನ್ಯವಾದವನ್ನು ಸಲ್ಲಿಸಿದರು ಹಾಗೂ ಶ್ರೀ ಬಸಯ್ಯ ಹಿರೇಮಠ ಪೂಜೆ ಕಾರ್ಯಕ್ರಮ ನಡೆಸಿಕೊಟ್ಟರು ಅಲ್ಲದೆ ಹಲವಾರು ರೈತರು ಮತ್ತು ಕೃಷಿ ಪರಿಕರ ಮಾರಾಟಗಾರರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.