ಇಂಡಿ.ತಾಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಪಕ್ಷ ಸೇರ್ಪಡೆ ಹಾಗೂ ಜೆಡಿಎಸ್ ಸಂಪರ್ಕ್ ಕಾರ್ಯಾಲಯದ ಉದ್ಘಾಟನೆ ನೆರವೇರಿಸಿದ,ಮಾಜಿ ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ ಹಲಸಂಗಿ ನಂತರ ಮಾತನಾಡುತ್ತಾ.ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಕಂಡ ದಿಗಂತ ನಾಯಕರು ನೀರಾವರಿ ಯೋಜನೆಯನ್ನು ಜಾರಿಗೆ ತರಲು ಶ್ರಮಿಸಿದ್ದಾರೆ,2023ರ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರು ಬಡವರ ಬಗ್ಗೆ ಅಪಾರವಾದ ಕಳಕಳಿಯನ್ನು ಹೂಂದಿದ್ದಾರೆ, ಹೋರಾಟ ದಿಂದಲೆ ತಮ್ಮ ಸಾರ್ವಜನಿಕ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ರೈತರ, ಅಸಂಘಟಿತ ಕಾರ್ಮಿಕರ,ಬಡವರ ಬಗ್ಗೆ ಅಪಾರವಾದ ಕಳಕಳಿಯನ್ನು ಹೂಂದಿದ್ದಾರೆ.ಹಿಂತಾ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ಮಾತನಾಡಿದರು.ಅಭ್ಯರ್ಥಿ ಬಿ ಡಿ ಪಾಟೀಲರು ಮಾತನಾಡುತ್ತಾ, ಪಂಚರತ್ನ ಕಾರ್ಯಕ್ರಮ ನಾಡಿನ ಬಡವರ, ನಿರುದ್ಯೋಗಿಗಳ,ಮಹಿಳೆಯರ, ಹಾಗು ರೈತರ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳವ ಕಾರ್ಯಕ್ರಮವಾಗಿದ್ದು,ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ನುಡಿದಂತೆ ನಡೆಯುವ ನಾಯಕರಾಗಿದ್ದು 2018ರ ಚುನಾವಣೆಯಲ್ಲಿ ನುಡಿದಂತೆ ನಡೆದು ರೈತರ ಸಾಲಮನ್ನಾ ಮಾಡಿದ್ದು ಇತಿಹಾಸ.ನನ್ನಂತಹ ಬಡ ವ್ಯಕ್ತಿಯನ್ನು ತಾಲೂಕಿನ ಸೇವೆಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.ಜೆಡಿಎಸ್ ಮುಖಂಡರಾದ ಮರೆಪ್ಪ ಗಿರಣಿವಡ್ಡರ, ಶ್ರೀ ಶೈಲಗೌಡ ಪಾಟೀಲ,ಮಾಜಿದ ಸೌದಾಗರ ಮಾತನಾಡಿದರು.ವೇದಿಕೆ ಮೇಲೆ ಸಿದ್ದು ಡಂಗಾ, ಧರ್ಮರಾಜ ಕಲ್ಲೂರ, ಬಸವರಾಜ ಹಂಜಗಿ, ರತ್ನಾಕರ್ ಪರೀಟ,ರಾಜು ಮಾಶ್ಯಾಳ, ಕಾಶಿನಾಥ್ ಭಜಂತ್ರಿ,ಗಂಗಾಧರ ಹಿರೇಮಠ,ಅಪ್ಪಾರಾಯ ಆಲಮೇಲ,ಹಣಮಂತ ಬಸನಾಳ,ಶಂಕರ ತೆಲಗ,ಗುರಣಗೌಡ ಬಗಲಿ,ಮಲ್ಲು ನರಳಿ, ದೇವೇಂದ್ರ ಕುಂಬಾರ,ಅಶೋಕ ತೇಲಗ,ಪ್ರಭು ಮಾಳಿ, ಶ್ರೀಶೈಲ ಬಬಲೇಶ್ವರ,ಚಂದು ಪೂಜಾರಿ ನಿರೂಪಿಸಿದರು