ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಖಾತೆಗೆ ಮತ್ತೊಂದು ಗೆಲುವು ಸೇರ್ಪಡೆಯಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.ಭಾರತದ ಬೌಲರ್ಗಳಲ್ಲಿ ಪರಸವಿ 4, ಮನತ್ ಕಶ್ಯಪ್ 2, ಅರ್ಚನಾ ದೇವಿ ಮತ್ತು ಸಾಧು ತಲಾ ಒಂದು ವಿಕೆಟ್ ಪಡೆದರು. ಲಂಕಾ ಕೇವಲ 59ರನ್ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಭಾರತ 7.2 ಓವರ್ನಲ್ಲೇ 60 ರನ್ ಗಳಸಿತು.ಸೌಮ್ಯತಿವಾರಿ (28) ಹಾಗೂ ಶೆಫಾಲಿ ವರ್ಮಾ (15) ಬ್ಯಾಟಿಂಗ್ನಲ್ಲಿ ಮಿಂಚಿದರು.