ಭಾರತ, ಯುಎಸ್, ಯುಕೆ, ರಷ್ಯಾ, ಚೀನಾ, ಫ್ರಾನ್ಸ್, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ ಮತ್ತು ಯುರೋಪಿಯನ್ ಯೂನಿಯನ್ ಜಿ20 ಸದಸ್ಯತ್ವವನ್ನು ಪಡೆದುಕೊಂಡ ರಾಷ್ಟ್ರಗಳಾಗಿವೆ. ಆದರೆ, ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಸದಸ್ಯತ್ವ ಇಲ್ಲದ ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ಯುಎಇ, ಸ್ಪೇನ್, ಸಿಂಗಾಪುರ್, ಒಮಾನ್, ನೈಜೀರಿಯಾ ಮತ್ತು ನೆದರ್ಲ್ಯಾಂಡ್ಸ್ ದೇಶಗಳನ್ನೂ ಸಹ ಭಾರತ ಆಹ್ವಾನಿಸಿದೆ.