ಚಂದ್ರಯಾನ-3 ಯಶಸ್ಸಿನ ಬೆನ್ನಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಸಜ್ಜಾಗಿದೆ. ಭಾಸ್ಕರನ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೋ ಆದಿತ್ಯ ಎಲ್-1 ನೌಕೆಯನ್ನು ಇಂದು ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಿದೆ. ಈ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಲು ಇಸ್ರೋ ಹೊರಟಿದೆ. ಆದಿತ್ಯ ಎಲ್ -1 ಅನ್ನು ಲಾಂಚ್ ವೀವ್ ಗ್ಯಾಲರಿಯಿಂದ್ ನೇರವಾಗಿ ವಿಕ್ಷಿಸಲು ಇಸ್ರೋ ಸಾರ್ವಜನಿಕರಿಗೆ ಅವಕಾಶ ನೀಡಿದೆ. ಇದಕ್ಕೆ ಇಸ್ರೋ ವೆಬ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.