ಇಂದಿನ ಮಧ್ಯಂತರ ಬಜೆಟ್ ವಿಕಸಿತ ಬಜೆಟ್ ಅಲ್ಲ, ಕುಸಿತದ ಬಜೆಟ್ ಎಂದು ಸಿಎಂ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ. ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಇದೊಂದು ನಿರಾಶದಾಯಕವಾದ ಬಜೆಟ್ ಎಂದರು. ಜನಸಾಮಾನ್ಯರ ಬಜೆಟ್ ಅಲ್ಲ ಚುನಾವಣೆಯ ಬಜೆಟ್. ಇದರಲ್ಲಿ ಮುಚ್ಚಿಟ್ಟಿರುವುದೆ ಜಾಸ್ತಿ, ಬರಗಾಲ, ನಿರುದ್ಯೋಗದ ಕುರಿತು ಏನು ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.