ಇಂಡಿ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಿಡಲಾಗುವ 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಗುಮ್ಮಟ ನಗರಿ ದಿನ ಪತ್ರಿಕೆಯ ಇಂಡಿ ತಾಲೂಕಾ ವರದಿಗಾರರಾದ ಸದ್ದಾಂ ಹುಸೇನ ಜಮಾದಾರ ಆಯ್ಕೆಯಾಗಿದ್ದಾರೆ ಎಂದು ಇಂಡಿ ತಾಲೂಕ ಕಾನಿಪ ಅಧ್ಯಕ್ಷ ಅಬುಶಾಮ ಹವಾಲದಾರ ಹಾಗೂ ಪ್ರಧಾನ ಕಾರ್ಯಾದರ್ಶಿಯಾದ ಲಾಲಸಿಂಗ ರಾಠೋಡ ತಿಳಿಸಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸದ್ದಾಂ ಹುಸೇನ ಜಮಾದಾರ ಗುಮ್ಮಟ ನಗರಿ ಕನ್ನಡ ದಿನ ಪತ್ರಿಕೆ ಇಂಡಿ ತಾಲೂಕಾ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದರು. ಕನ್ನಡ ಹಾಗೂ ಉರ್ದು ಡೇಲಿ ಸಾಲಾರ ದಿನ ಪತ್ರಿಕೆಯಲ್ಲಿ ಕಾರ್ಯನಿರವಹಿಸಿ ಹಾಗೂ ಅನೇಕ ಸಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಜುಲೈ 28 ರಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಯೋಗದಲ್ಲಿ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಹಾಗೂ ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕಾನಿಪ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡುರ, ಸಂಸದ ರಮೇಶ ಜಿಗಜಣಗಿ, ಕಾನಿಪ ಜಿಲ್ಲಾ ಅಧ್ಯಕ್ಷರಾದ ಸಂಗಮೇಶ ಚೋರಿ, ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಜಿಲ್ಲಾ ಅಧ್ಯಕ್ಷರಾದ ಸಂಗಮೇಶ ಚೋರಿ ತಿಳಿಸಿದ್ದಾರೆ.