ಬಿಜಾಪುರ್ ನಗರದಲ್ಲಿ ಕಮಲ್ ಸಾಬ್ ಎಂದು ಪ್ರಸಿದ್ಧಿ ಹೊಂದಿದಂತಹ ಅತ್ಯಂತ ಸರಳ ಹಾಗೂ ಸಜ್ಜನ, ಸಮಾಜ ಸೇವಕ, ಮಾಜಿ ನಗರಸಭಾ ಸದಸ್ಯರಾದ ಕಮಾಲ್ ಪಾಶ ಇನಾಮದಾರ ವಿಧಿವಶ ರಾಗಿದ್ದಾರೆ.ಇವರು ವಿಜಯಪುರ ನಗರದಲ್ಲಿ ಬಹಳಷ್ಟು ಕಡೆಗಳಲ್ಲಿ ಆಕ್ಸಿಡೆಂಟ್ ಆಗಿ ಮೃತ ಆದಂತಹ ದೇಹಗಳನ್ನು ಅತ್ಯಂತ ಗೌರವದಿಂದ ಸ್ವಚ್ಛಗೊಳಿಸಿ ಮುಂದೆ ನಿಂತು ಅಂತ್ಯಕ್ರಿಯೆ ಮಾಡಿಸಿದ್ದಾರೆ. ಮತ್ತು ಬೇರೆ ಬೇರೆ ಕಾಯಿಲೆಗಳಿಂದ ಮೃತಪಟ್ಟ ವ್ಯಕ್ತಿಗಳ ದೇಹಕ್ಕೆ ಅವರ ರಕ್ತಸಂಬಂಧಿಗಳೇ ಮುಟ್ಟದಿದ್ದಾಗ ಕಮಾಲ್ ಸಾಬ್ ರವರು ಅಂತಹ ಮೃತ ದೇಹಗಳನ್ನು ತಾವೇ ಸ್ವಚ್ಛಗೊಳಿಸಿ ಅಂತಕ್ರಿಯೆ ಮಾಡಿಸಿದ ಸಾವಿರಾರು ಉದಾಹರಣೆಗಳಿಗೆ, ಬಜಾಜ್ ಸ್ಕೂಟರ್ ಮೇಲೆ ಬೆಳಗ್ಗೆ ಎದ್ದು ತನ್ನ ವಾರ್ಡಿನಲ್ಲಿ ಮತ್ತು ನಗರದ ಇತರೆ ಕಡೆಗಳಲ್ಲಿ ಸಂಚರಿಸಿ ಎಲ್ಲಿಯಾದರೂ ಗಲೀಜು ಕಂಡಾಗ ತಕ್ಷಣ ನಗರಸಭೆಗೆ ಮಾತನಾಡಿ ಸ್ವಚ್ಛಗೊಳಿಸುವುದು ಮತ್ತು ಇವರನ್ನು ಕಂಡು ಜನರು ತಮ್ಮ ಸಮಸ್ಯೆಗಳನ್ನು ತಿಳಿಸಿದ ತಕ್ಷಣ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ದಿನನಿತ್ಯದ ಕಾಯಕ ಇವರದ್ದಾಗಿತ್ತು.