ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರರು ನಿಸ್ವಾರ್ಥ ಮನೋಭಾವದಿಂದ ದೇಶ ಪ್ರೇಮದಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟ ಮಾಡಿದರು. ಈ ಹೋರಾಟದ ಚರಿತ್ರೆಯಿಂದ ಇಂದಿನ ಯುವಕರು, ವಿದ್ಯಾರ್ಥಿಗಳು ರಾಷ್ಟ್ರಪ್ರೇಮದ ಬಗ್ಗೆ ಪ್ರೇರಣೆ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನವೀನ ಅರಕೇರಿ ಹೇಳಿದರು.
ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವತಂತ್ರ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ದೃಷ್ಟಿಯಿಂದ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮವು ಜಾಗೃತ ಹಾಗೂ ಚೈತನ್ಯ ಶೀಲ ಗ್ರಾಮವಾಗಿತ್ತು. ಇಲ್ಲಿಯ ಸ್ವಾತಂತ್ರ್ಯ ಹೋರಾಟವು ಮೂಲಭೂತವಾಗಿ ”ಗಾಂಧಿವಾದದ” ಆದರ್ಶವಾಗಿತ್ತು ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಉಪನ್ಯಾಸ ನೀಡಿ,
ಸ್ವಾತಂತ್ರ್ಯ ಹೋರಾಟದ ನಾಯಕರ ಕರೆಗೆ ಸ್ಪಂದಿಸಿದ ನಾಗಠಾಣ ಗ್ರಾಮವು ಕೂಡ ತಾಯಿ ಭಾರತಿಗಾಗಿ ತನ್ನ ತ್ಯಾಗಕ್ಕಾಗಿ ಹೆಮ್ಮೆಯಿಂದ ತಲೆ ಎತ್ತಿ ನಿಂತಿತು. ಇಲ್ಲಿಯ ಗುರುಬಸಪ್ಪ ಅರಕೇರಿ, ಹಣಮಂತಪ್ಪ ಕತ್ನಳ್ಳಿ, ಸಾಯಬಣ್ಣ ಶಿರಕನಹಳ್ಳಿ, ಹಣಮಂತಪ್ಪ ವಾಡೆ, ಗುರಲಿಂಗಪ್ಪ ಲೋಣಿ, ದುಂಡಪ್ಪ ಹುಣಶ್ಯಾಳ, ಚನ್ನಪ್ಪ ಹಂಡಿ, ಹುಸೇನ್ ಬೇಗ್ ಅಥರ್ಗ, ಚನ್ನಪ್ಪ ಹುಣಶ್ಯಾಳ, ಲಚ್ಚಪ್ಪ ಗೋರನಾಳ ಅವರಂತಹ ಅನೇಕ ಧೀಮಂತ ನಾಯಕರು ಹೋರಾಟದ ಭಾಗವಾಗಿದ್ದರು ಎಂಬುದು ಗ್ರಾಮದ ಹೆಮ್ಮೆಯಾಗಿದೆ ಎಂದು ಹೇಳಿದರು.
ಡಾ.ಮಹಾಂತೇಶ ಗುಬ್ಬೇವಾಡ ಮಾತನಾಡಿ, ದೇಶ ಕಟ್ಟುವ ಜವಾಬ್ದಾರಿ ಯುವ ಜನರ ಮೇಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕಾಗಿದೆ’ ಎಂದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಹುಣಶ್ಯಾಳ, ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ,
ಜಯಶ್ರೀ ಬಂಗಾರಿ, ಅಂಬಿಕಾ ಶಿರಕನಹಳ್ಳಿ, ಬಸಮ್ಮ ವಡಗೇರಿ, ಸ್ನೇಹ ಹಕ್ಕಿ, ಮಧುಮತಿ ನಿಕ್ಕಂ, ಸರೋಜನಿ ಕಟ್ಟಿಮನಿ, ರೇಣುಕಾ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.