ಕರ್ನಾಟಕ ಜಿಲ್ಲಾವಾರು 10ನೇ ತರಗತಿ ಫಲಿತಾಂಶ 2024: ಉಡುಪಿ ಪ್ರಥಮ ಸ್ಥಾನ(94%) ಪಡೆದಿದೆ. ದ್ವಿತೀಯ ಸ್ಥಾನ ದಕ್ಷಿಣ ಕನ್ನಡ(92.12%) ಜಿಲ್ಲೆಗೆ ಸಿಕ್ಕಿದ್ದು ಶಿವಮೊಗ್ಗ (88.67%) ಮೂರನೇ ಸ್ಥಾನ ಪಡೆದಿದೆ. ಇನ್ನು ರಾಜ್ಯದಲ್ಲಿ ಶೇಕಡಾವಾರು ಕೊನೆ ಸ್ಥಾನ ಪಡೆದ ಜಿಲೆ ಯಾದಗಿರಿ (50.59%).
ಬೆಂಗಳೂರು, ಮೇ.09: ಇಂದು 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ.
ರಾಜ್ಯಾದ್ಯಂತ 8 ಲಕ್ಷ 69 ಸಾವಿರದ 968 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸದ್ಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಣೆ ಮಾಡಿದೆ. ಎಂದಿನಂತೆ ಈ ಬಾರಿಯೂ ಕೂಡ ಹೆಣ್ಣುಮಕ್ಕಳೇ ರಿಸಲ್ಟ್ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಇನ್ನು ಉಡುಪಿಗೆ ರಾಜ್ಯದಲ್ಲಿ ಮೊದಲ ಸ್ಥಾನ ಸಿಕ್ಕಿದೆ. ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ.
2024ರ ಮಾ.25ರಿಂದ 2024ರ ಏಪ್ರಿಲ್ 6ರವರೆಗೆ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ 441910 ವಿದ್ಯಾರ್ಥಿಗಳು, 428058 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 6,31,204 ವಿದ್ಯಾರ್ಥಿಗಳು ಪಾಸ್ ಆಗಿದ್ದು ಈ ಬಾರಿ ರಾಜ್ಯಾದ್ಯಂತ 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2,87,416 (65.90%) ಬಾಲಕರು ಪಾಸ್ ಆಗಿದ್ದು 3,43,788 (81.11%) ಬಾಲಕಿಯರು ಪಾಸ್ ಆಗಿದ್ದಾರೆ. ಈ ಮೂಲಕ SSLC ಪರೀಕ್ಷೆಯಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಇನ್ನು ಉಡುಪಿ ಪ್ರಥಮ ಸ್ಥಾನ(94%) ಪಡೆದಿದೆ. ದ್ವಿತೀಯ ಸ್ಥಾನ ದಕ್ಷಿಣ ಕನ್ನಡ(92.12%) ಜಿಲ್ಲೆಗೆ ಸಿಕ್ಕಿದ್ದು ಶಿವಮೊಗ್ಗ (88.67%) ಮೂರನೇ ಸ್ಥಾನ ಪಡೆದಿದೆ. ಇನ್ನು ರಾಜ್ಯದಲ್ಲಿ ಶೇಕಡಾವಾರು ಕೊನೆ ಸ್ಥಾನ ಪಡೆದ ಜಿಲೆ ಯಾದಗಿರಿ (50.59%).
ಜಿಲ್ಲಾವಾರು ಫಲಿತಾಂಶ
• ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ (94%) ಫಲಿತಾಂಶ
• ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ (92.12%)
• ಶಿವಮೊಗ್ಗ ಜಿಲ್ಲೆಗೆ ಮೂರನೇ ಸ್ಥಾನ (88.67%)
• ಕೊಡಗು ಜಿಲ್ಲೆಗೆ ನಾಲ್ಕನೇ ಸ್ಥಾನ (88.67%)
• ಉತ್ತರ ಕನ್ನಡ ಜಿಲ್ಲೆಗೆ ಐದನೇ ಸ್ಥಾನ (86.54%)
• ಹಾಸನ ಜಿಲ್ಲೆಗೆ ಆರನೇ ಸ್ಥಾನ (86.28%)
• ಮೈಸೂರು ಜಿಲ್ಲೆಗೆ ಏಳನೇ ಸ್ಥಾನ (85.5%)
• ಶಿರಸಿ ಜಿಲ್ಲೆಗೆ ಎಂಟನೇ ಸ್ಥಾನ (84.64%)
• ಬೆಂಗಳೂರು ಗ್ರಾ ಜಿಲ್ಲೆಗೆ ಒಂಬ್ತತೇ ಸ್ಥಾನ (83.67%)
• ಚಿಕ್ಕಮಗಳೂರು ಜಿಲ್ಲೆಗೆ ಹತ್ತನೇ ಸ್ಥಾನ (83.39%)
• ವಿಜಯಪುರ ಜಿಲ್ಲೆಗೆ 11ನೇ ಸ್ಥಾನ (79.82%)
• ಬೆಂಗಳೂರು ದಕ್ಷಿಣ ಜಿಲ್ಲೆಗೆ 12ನೇ ಸ್ಥಾನ (79%)
• ಬಾಗಲಕೋಟೆ ಜಿಲ್ಲೆಗೆ 13ನೇ ಸ್ಥಾನ (77.92%)
• ಬೆಂಗಳೂರು ಉತ್ತರ ಜಿಲ್ಲೆಗೆ 14ನೇ ಸ್ಥಾನ (77.09%)
• ಹಾವೇರಿ ಜಿಲ್ಲೆಗೆ 15ನೇ ಸ್ಥಾನ (75.85%)
• ತುಮಕೂರು ಜಿಲ್ಲೆಗೆ 16ನೇ ಸ್ಥಾನ (75.16%)
• ಗದಗ ಜಿಲ್ಲೆಗೆ 17ನೇ ಸ್ಥಾನ (74.76%)
• ಚಿಕ್ಕಬಳ್ಳಾಪುರ ಜಿಲ್ಲೆಗೆ 18ನೇ ಸ್ಥಾನ (73.61%)
• ಮಂಡ್ಯ ಜಿಲ್ಲೆಗೆ 19ನೇ ಸ್ಥಾನ (73.59%)
• ಕೋಲಾರ ಜಿಲ್ಲೆಗೆ 20ನೇ ಸ್ಥಾನ (73.57%)
• ಚಿತ್ರದುರ್ಗ ಜಿಲ್ಲೆಗೆ 21ನೇ ಸ್ಥಾನ (72.85%)
• ಧಾರವಾಡ ಜಿಲ್ಲೆಗೆ 22ನೇ ಸ್ಥಾನ (72.67%)
• ದಾವಣಗೆರೆ ಜಿಲ್ಲೆಗೆ 23ನೇ ಸ್ಥಾನ (72.49%)
• ಚಾಮರಾಜನಗರ ಜಿಲ್ಲೆಗೆ 24ನೇ ಸ್ಥಾನ (71.59%)
• ಚಿಕ್ಕೋಡಿ ಜಿಲ್ಲೆಗೆ 25ನೇ ಸ್ಥಾನ (69.82%)
• ರಾಮನಗರ ಜಿಲ್ಲೆಗೆ 26ನೇ ಸ್ಥಾನ (69.53%)
• ವಿಜಯನಗರ ಜಿಲ್ಲೆಗೆ 27ನೇ ಸ್ಥಾನ (65.61%)
• ಬಳ್ಳಾರಿ ಜಿಲ್ಲೆಗೆ 28ನೇ ಸ್ಥಾನ ಸಿಕ್ಕಿದೆ (64.99%)
• ಬೆಳಗಾವಿ ಜಿಲ್ಲೆಗೆ 29ನೇ ಸ್ಥಾನ (64.93%)
• ಮಧುಗಿರಿ ಜಿಲ್ಲೆಗೆ 30ನೇ ಸ್ಥಾನ (62.44%)
• ರಾಯಚೂರು ಜಿಲ್ಲೆಗೆ 31ನೇ ಸ್ಥಾನ (61.2%)
• ಕೊಪ್ಪಳ ಜಿಲ್ಲೆಗೆ 32ನೇ ಸ್ಥಾನ (61.16%)
• ಬೀದರ್ ಜಿಲ್ಲೆಗೆ 33ನೇ ಸ್ಥಾನ (57.52%)
• ಕಲಬುರಗಿ ಜಿಲ್ಲೆಗೆ 34ನೇ ಸ್ಥಾನ (53.04%)
• SSLC ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ 50.59% ಸಿಕ್ಕಿದೆ
ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪಾಸಾದವರು ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದಾಗಿದೆ.