ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದೊಂದಿಗೆ ಕೊರ್ತಿ-ಕೊಲ್ದಾರ ಸೇತುವೆ ಮಂಜೂರಾತಿ ಬೆಳ್ಳಿ ಮಹೋತ್ಸವ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಸೇತುವೆ ಹೋರಾಟದ ರೂವಾರಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ನೂರಕ್ಕೂ ಅಧಿಕ ಎತ್ತಿನ ಬಂಡಿಗಳು, ಐವತ್ತಕ್ಕೂ ಅಧಿಕ ಟ್ರಾಕ್ಟರ್ ಗಳಲ್ಲಿ ರಾಷ್ಟ್ರಧ್ವಜದ ಮೆರವಣಿಗೆ ಮಾಡಲಾಯಿತು.
ದೇಶದ ಎರಡನೇಯ ಉದ್ದದ ಸೇತುವೆ ಎಂದು ಹೆಗ್ಗಳಿಕೆ ಪಡೆದ 3 ಕಿ. ಮೀ ಉದ್ದದ ಕೊರ್ತಿ ಕೊಲ್ಹಾರ ಸೇತುವೆಯಿಂದ ಕೊಲ್ಹಾರ ಪಟ್ಟಣದ ವರೆಗೆ ಮೆರವಣಿಗೆ ನಡೆಸಲಾಯಿತು.
ಈ ಮೆರವಣಿಗೆಯಲ್ಲಿ ಕೊಲ್ಹಾರ ಸಂತ್ರಸ್ತರು ಸೇರಿದಂತೆ ಬಸವನ ಬಾಗೇವಾಡಿ ಮತಕ್ಷೇತ್ರ ಸಾವಿರಾರು ರೈತರು, ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಇದಕ್ಕೂ ಮುನ್ನ ಸೇತುವೆ ಕೆಳಗೆ ಕೃಷ್ಣಾ ನದಿ ಹಿನ್ನಿರಿನಲ್ಲಿ ಡೋಣಿಗಳಲ್ಲಿ ರಾಷ್ಟ್ರಧ್ವಜ ವನ್ನು ನೆಟ್ಟು ಪ್ರದರ್ಶನ ಮಾಡಲಾಯಿತು.
ಮೆರವಣಿಗೆ ನಂತರ ಕೊಲ್ಹಾರ ಪಟ್ಟಣದಲ್ಲಿ ಜರುಗಿದ ಬೃಹತ್ ಸಮಾವೇಶದಲ್ಲಿ ಕೊರ್ತಿ-ಕೊಲ್ದಾರ ಸೇತುವೆ ಹೋರಾಟಕ್ಕೆ ಕೈಜೋಡಿಸಿದ ಮಹನಿಯರಿಗೆ ಸ್ಮರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶೀಲವಂತ ಹಿರೇ ಮಠ, ಕೈಲಾಸನಾಥ ದೇವರು, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚ ಬಾಳ), ನಿಂಬೆ, ಅಭಿಮಾನಿ ನಿಗಮದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಶಂಕರಗೌಡ ಪಾಟೀಲ, ರಾಮಣ್ಣ ಬಾಟಿ, ಅಲ್ಲಾಭಕ್ಷ ಬಿಜಾಪೂರ, ವಿರೂಪಾಕ್ಷಿ ಕೋಲಕಾರ, ಬಾಬು ಬಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಲಾಲಸಾಬ ಸವಾರಗೋಳ I Today news ವಿಜಯಪುರ