ಇಂಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ ಮುಖ್ಯ ಕಾಲುವೆ 1 ಕಿ.ಮಿ ಯಿಂದ 172 ಕಿ.ಮಿ ಮುಖ್ಯ ಕಾಲುವೆ ವರೆಗೆ ನೀರು ಹರಿಯ ಬಿಡಲಾಗಿದೆ.
ಇಂಡಿ ಮುಖ್ಯ ಕಾಲುವೆ, ಮಾವಿನಹಳ್ಳಿ, ಅಹಿರಸಂಗ, ಹಲಸಂಗಿ, ಝಳಕಿ ಕ್ರಾಸ್, ಹಾವಿನಾಳ, ಚಡಚಣ, ದಸೂರ ಗ್ರಾಮ ಕೃಷ್ಣಾ ಮುಖ್ಯ ಕಾಲುವೆಗೆ ನೀರು ಹರಿಯುತ್ತಿದ್ದು ಕಾಲುವೆಯ ನೀರು ಭೀಮಾ ನದಿಗೆ ಇದೇ ಪ್ರಥಮ ಬಾರಿಗೆ ಕಳೆದ ಹತ್ತು ವರ್ಷಗಳಲ್ಲಿ ಸೇರಿದೆ.
ಅದಲ್ಲದೆ ಹಳ್ಳಗಳಾದ ಹಾವಿನಾಳ, ಹಲಸಂಗಿ, ಭೈರುಣಗಿ, ಇಂಡಿ ಹಳ್ಳ, ಇಂಗಳಗಿ, ನೆಹರು ನಗರ, ಹಿರೇಬೇವನೂರ ತಾಂಡಾ, ಭ್ಯೂಯ್ಯಾರ ಹಳ್ಳದಿಂದ ಭೀಮಾ ನದಿ ಸೇರಲು ಪ್ರಾರಂಭವಾಗಿದೆ.
ಬಹುತೇಕ ಕಳೆದ 10 ವರ್ಷಗಳಿಂದ ಇದೇ ಪ್ರಥಮ ಬಾರಿಗೆ ಹಳ್ಳದಲ್ಲಿ ನೀರು ಹರಿದು ಪ್ರಥಮ ಬಾರಿಗೆ ಭೀಮಾ ನದಿ ಸೇರುತ್ತದೆ.
ಇದರಿಂದ ಕಾಲುವೆ ಮತ್ತು ಹಳ್ಳ ತೀರದ ಗ್ರಾಮಗಳಲ್ಲಿಯ ಬೋರ್ ವೆಲ್, ತೆರೆದ ಬಾವಿ ಗಳಿಗೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ.ಮತ್ತು ಜಲ ಮೂಲಗಳು ಹೆಚ್ಚಾಗಲಿವೆ.
ಅದಲ್ಲದೆ ತಾಲೂಕಿನ ಗ್ರಾಮಗಳಲ್ಲಿ ಹರಿಯುವ ಮುಖ್ಯ ಕಾಲುವೆ ಮತ್ತು ಇನ್ನಿತರ ಕಡೆ ಹರಿಯುವ ಮುಖ್ಯ ಕಾಲುವೆ ಕಾರ್ಯವಾಗಿ 22 ವರ್ಷಗಳೇ ಕಳೆದು ಅಲ್ಲಿ ನೀರು ಹರಿಸುವದು ಅತೀ ದುಸ್ತರವಾಗಿತ್ತು.
ಎಲ್ಲ ಕಡೆಯಿಂದಲೂ ವರದಿ ತರಸಿಕೊಂಡು ಮನೋಜಕುಮಾರ ಗಡಬಳ್ಳಿ ನ. 3 ಕ್ಕೆ ರಾಂಪುರದಲ್ಲಿ ಅಧಿಕ್ಷಕ ಅಭಿಯಂತರಾಗಿ ಅಧಿಕಾರ ವಹಿಸಿಕೊಂಡು ನ.4 ಕ್ಕೆ ಇಂಡಿಯಲ್ಲಿ ಸಭೆ ಕರೆದು ಅವರ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಕಾರ್ಯ ಮಾಡಿದ ಪ್ರಯತ್ನದಿಂದ ಕಾಲುವೆಯ ಕೊನೆಯ ಭಾಗದ ವರೆಗೆ ನೀರು ಕಂಡಿದೆ.
ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರ ವಿನಂತಿಯ ಮೇರೆಗೆ ಕೃಷ್ಣಾ ಕೊನೆಯ ಭಾಗದ ವರೆಗೆ ನೀರು ಹರಿಸಲು ಪ್ರಯತ್ನಿಸುತ್ತಿದ್ದು ಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾ ಕಾಲುವೆ ನೀರು ದೊರೆಯಲಿದೆ.ಕಾಲುವೆಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದು ಕೊನೆಯ ಭಾಗದ ವರೆಗೆ ತಪುಪಿದೆ.
ಕೃಷ್ಣಾ ಮುಖ್ಯ ಕಾಲುವೆ ಕೊನೆಯ ಭಾಗದ ವರೆಗೆ ಮತ್ತು ತಾಲೂಕಿನ ಎಲ್ಲ ಹಳ್ಳಗಳಲ್ಲಿ ನೀರು ಹರಿಯುವಂತೆ ಮತ್ತು ಎಲ್ಲ ಕೆರೆ ತುಂಬಲು ಸಭೆಯಲ್ಲಿ ಚರ್ಚಿಸಿದಂತೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಇದೇ ಪ್ರಥಮ ಬಾರಿಗೆ ನೀರು ಹರಿಸುವ ಪ್ರಯತ್ನ ಮಾಡಿದ್ದಾರೆ.